ಪೆಟ್ರೋಲ್ ಹಾಕಿಸಿ ಹಣ ನೀಡದೆ ಪರಾರಿಯಾದ ಕಾರು ಚಾಲಕ: ತಡೆದರೂ ನಿಲ್ಲಿಸದ ಕಿರಾತಕ!

kadaba times

ಸುಳ್ಯ: ಅರಂತೋಡಿನ ನಯಾರ ಪೆಟ್ರೋಲ್ ಪಂಪ್‌ನಲ್ಲಿ ಕಾರಿಗೆ ಪೆಟ್ರೋಲ್ ಹಾಕಿಸಿ ಹಣ ನೀಡದೆ ಚಾಲಕನೊಬ್ಬ ಪರಾರಿಯಾದ ಘಟನೆ ನಡೆದಿದೆ. ಸುಮಾರು 2,510 ರೂಪಾಯಿ ಮೌಲ್ಯದ ಇಂಧನವನ್ನು ತುಂಬಿಸಿಕೊಂಡು ಹಣ ಪಾವತಿಸದೆ ಚಾಲಕ ಸಿನಿಮೀಯ ಶೈಲಿಯಲ್ಲಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆ.

kadaba times
uniq

ಅರಂತೋಡು ಪೆಟ್ರೋಲ್ ಬಂಕ್‌ಗೆ ಬಂದ ಕಾರು ಚಾಲಕ, ತನ್ನ ವಾಹನಕ್ಕೆ ರೂ. 2,510 ಮೌಲ್ಯದ ಪೆಟ್ರೋಲ್ ಹಾಕಿಸಿದ್ದಾನೆ. ಆದರೆ ಇಂಧನ ತುಂಬಿದ ತಕ್ಷಣ ಹಣ ನೀಡುವ ಬದಲು ಏಕಾಏಕಿ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ತಕ್ಷಣ ಎಚ್ಚೆತ್ತುಕೊಂಡ ಬಂಕ್ ಸಿಬ್ಬಂದಿ ಈ ಬಗ್ಗೆ ಜಾಲ್ಸೂರು ಚೆಕ್ ಪೋಸ್ಟ್ ಮತ್ತು ಇತರರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆಯೇ ಜಾಲ್ಸೂರು ಚೆಕ್ ಪೋಸ್ಟ್ ಬಳಿ ಫಾರೆಸ್ಟ್ ಸಿಬ್ಬಂದಿಗಳು,ಆಟೋ ಚಾಲಕರು ಹಾಗೂ ಜಾಲ್ಸೂರು ಪೆಟ್ರೋಲ್ ಬಂಕ್ ಸಿಬ್ಬಂದಿಗಳು ಜಂಟಿಯಾಗಿ ಕಾರನ್ನು ಅಡ್ಡಗಟ್ಟಲು ಪ್ರಯತ್ನಿಸಿದರು. ಆದರೆ ಚಾಲಕ ತನ್ನ ಉದ್ಧಟತನವನ್ನು ಮುಂದುವರಿಸಿ, ಅಲ್ಲಿ ನೆರೆದಿದ್ದವರ ಮೇಲೆಯೇ ಕಾರು ಚಲಾಯಿಸುವಂತೆ ನುಗ್ಗಿಸಿ, ಎಲ್ಲಿಯೂ ನಿಲ್ಲಿಸದೆ ಅತೀ ವೇಗದಲ್ಲಿ ಪುತ್ತೂರು ಕಡೆಗೆ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

kadaba times
kadaba times

ಈ ಕೃತ್ಯದ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಿದ್ದು, ಸಂಬಂಧಪಟ್ಟ ಪೆಟ್ರೋಲ್ ಬಂಕ್ ಮಾಲೀಕರು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಸಾರ್ವಜನಿಕ ಪ್ರದೇಶಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

Related Articles

Latest Articles