ನೂತನ ನ್ಯಾಯಾಲಯದ ಮೊದಲ ತೀರ್ಪು: ಅಕ್ರಮ ಮದ್ಯ ಮಾರಾಟ ಪ್ರಕರಣದ ಆರೋಪಿ ಖುಲಾಸೆ

kadaba times

ಪುತ್ತೂರಿನ ಆನೆಮಜಲಿನಲ್ಲಿ ಉದ್ಘಾಟನೆಗೊಂಡ ನೂತನ ನ್ಯಾಯಾಲಯ ಸಂಕೀರ್ಣದಲ್ಲಿ ಮೊದಲ ತೀರ್ಪು ಪ್ರಕಟವಾಗಿದೆ. ನೆಲ್ಯಾಡಿಯ ಅಕ್ರಮ ಮದ್ಯ ಮಾರಾಟ ಪ್ರಕರಣದ ಆರೋಪಿಯನ್ನು  ನ್ಯಾಯಾಲಯ ದೋಷಮುಕ್ತಗೊಳಿಸಿದೆ.

kadaba times
uniq

ಬನ್ನೂರಿನ ಆನೆಮಜಲಿನಲ್ಲಿ ನೂತನವಾಗಿ ಲೋಕಾರ್ಪಣೆಗೊಂಡ ನ್ಯಾಯಾಲಯ ಸಂಕೀರ್ಣದಲ್ಲಿ ಕಲಾಪಗಳು ಆರಂಭಗೊಂಡ ಬೆನ್ನಲ್ಲೇ  ಪ್ರಥಮ ತೀರ್ಪು ಪ್ರಕಟವಾಗಿದೆ. ಮೂರು ವರ್ಷಗಳ ಹಿಂದೆ ನೆಲ್ಯಾಡಿಯಲ್ಲಿ ನಡೆದಿದ್ದ ಅಕ್ರಮ ಮದ್ಯ ಮಾರಾಟ ಪ್ರಕರಣದ ಆರೋಪಿಯನ್ನು ನ್ಯಾಯಾಲಯವು ದೋಷಮುಕ್ತಗೊಳಿಸಿ ಆದೇಶಿಸಿದೆ.

2022ರ ಜೂನ್ 1ರಂದು ನೆಲ್ಯಾಡಿ ಶಿರಾಡಿ ಗ್ರಾಮದ ಕುದ್ಕೋಳಿ ಎಂಬಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಪದ್ಮನಾಭ ಎಂಬವರನ್ನು ಬಂಧಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

kadaba times
kadaba times

ಈ ಪ್ರಕರಣದ ವಿಚಾರಣೆಯು ಪುತ್ತೂರಿನ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯಿತು. ವಿಚಾರಣೆ ಸಂದರ್ಭದಲ್ಲಿ ಆರೋಪಿಯ ವಿರುದ್ಧ ಯಾವುದೇ ಬಲವಾದ ಸಾಕ್ಷ್ಯಧಾರಗಳು ಲಭ್ಯವಾಗದ ಹಿನ್ನೆಲೆಯಲ್ಲಿ, ನ್ಯಾಯಾಧೀಶರಾದ ಶಿವಣ್ಣ ಅವರು ಆರೋಪಿ ಪದ್ಮನಾಭ ಅವರನ್ನು ದೋಷಮುಕ್ತಗೊಳಿಸಿ ತೀರ್ಪು ಪ್ರಕಟಿಸಿದರು. ಆರೋಪಿ ಪರವಾಗಿ ಹಿರಿಯ ನ್ಯಾಯವಾದಿ ಮಹೇಶ್ ಕಜೆ ಅವರು ವಾದ ಮಂಡಿಸಿದ್ದರು.

ಬನ್ನೂರಿನ ಆನೆಮಜಲಿನಲ್ಲಿ ನೂತನ ನ್ಯಾಯಾಲಯ ಸಂಕೀರ್ಣ ಉದ್ಘಾಟನೆಗೊಂಡ ದಿನವೇ ಮಧ್ಯಾಹ್ನದ ಬಳಿಕ ಕಲಾಪಗಳು ಆರಂಭವಾಗಿದ್ದವು. ಈ ನೂತನ ಸಂಕೀರ್ಣದಲ್ಲಿ ಪ್ರಕಟವಾದ ಮೊಟ್ಟಮೊದಲ ತೀರ್ಪು ಇದಾಗಿದೆ ಎಂಬುದು ಗಮನಾರ್ಹ.

Related Articles

Latest Articles