ಕೋಡಿಂಬಾಳ ಬಳಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ಮೆಸ್ಕಾಂಗೆ ನಷ್ಟ, ಚಾಲಕನ ವಿರುದ್ಧ ಪ್ರಕರಣ ದಾಖಲು

kadaba times

ಕಡಬ ತಾಲೂಕಿನ ಕೋಡಿಂಬಾಳದಲ್ಲಿ ಅಜಾಗರೂಕತೆಯಿಂದ ಕಾರು ಚಲಾಯಿಸಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಚಾಲಕ ಎ.ಎಸ್.ಐ  ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.

kadaba times
uniq

ಕಡಬ: ತಾಲೂಕಿನ ಕೋಡಿಂಬಾಳ ಗ್ರಾಮದ ಪಡೆಜ್ಜಾರು ಮುರಚೆಡವು ಎಂಬಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಫೆಬ್ರವರಿ 4 ರ  ಮುಂಜಾನೆ ಸಂಭವಿಸಿದೆ.

ಘಟನೆಯ ವಿವರ: ಪೆ.4 ರಂದು  ಬೆಳಿಗ್ಗೆ ಸುಮಾರು 05:30 ಗಂಟೆಗೆ    ಸೀತಾರಾಮ ಗೌಡ ಎಂಬುವವರು ತಮ್ಮ  ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ, ವಾಹನದ ಮೇಲಿನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಹೈ-ಟೆನ್ಷನ್ (H.T) ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ.ಸದ್ಯ ಎ ಎಸ್ ಐ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬವು ತೀವ್ರವಾಗಿ ಹಾನಿಗೊಂಡಿದ್ದು, ಇದರಿಂದ ಮೆಸ್ಕಾಂ ಇಲಾಖೆಗೆ ಅಂದಾಜು ರೂ. 17,500/- ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಘಟನೆಯಿಂದಾಗಿ ಸ್ಥಳೀಯವಾಗಿ ವಿದ್ಯುತ್ ವ್ಯತ್ಯಯವೂ ಉಂಟಾಗಿತ್ತು ಎನ್ನಲಾಗಿದೆ.

kadaba times
kadaba times

ಈ ಬಗ್ಗೆ ಮೆಸ್ಕಾಂ ಕಡಬ ಶಾಖೆಯ ಸಹಾಯಕ ಇಂಜಿನಿಯರ್ ಆದ ಸತ್ಯನಾರಾಯಣ ಸಿ.ಕೆ. ಅವರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಅಜಾಗರೂಕತೆಯ ಚಾಲನೆಗಾಗಿ ಚಾಲಕ ಸೀತಾರಾಮ ಗೌಡ ಅವರ ವಿರುದ್ಧ ಕಲಂ 281 BNS–2023 ರಂತೆ ಅ.ಕ್ರ: 13/2026 ರಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ರಾತ್ರಿ 1 ಗಂಟೆಗೆ ನಾಯಿ ಅಡ್ದ ಬಂದು ಅಪಘಾತ ಸಂಭವಿಸಿದೆ ಎಂದು ಸುದ್ದಿ ಹರಡಿತ್ತು.

Related Articles

Latest Articles