ಚಿಕಿತ್ಸೆಗಾಗಿ ಯೆನೆಕಲ್ಲಿಗೆ ಬಂದಿದ್ದ ವ್ಯಕ್ತಿಗೆ ಹಠಾತ್ ಉಸಿರಾಟದ ಸಮಸ್ಯೆ:ಕಡಬ ಆಸ್ಪತ್ರೆಗೆ ಕರೆತಂದರೂ ಬದುಕಲಿಲ್ಲ

kadaba times

ಮಂಗಳೂರು ಮೂಲದ ವ್ಯಕ್ತಿಯೊಬ್ಬರು  ಸುಬ್ರಹ್ಮಣ್ಯದ ಯೆನೆಕಲ್ಲಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಉಸಿರಾಟದ ಸಮಸ್ಯೆಯಿಂದ ನಿಧನರಾಗಿದ್ದಾರೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

kadaba times
uniq

ಸುಬ್ರಹ್ಮಣ್ಯ: ಚಿಕಿತ್ಸೆಗಾಗಿ ಯೆನೆಕಲ್ಲಿಗೆ ಬಂದಿದ್ದ ವೃದ್ಧರೊಬ್ಬರು ಹಠಾತ್ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟ ಘಟನೆ ವರದಿಯಾಗಿದೆ.

ಮೃತರನ್ನು ಮಂಗಳೂರು ತಾಲೂಕಿನ ತೋಕೂರು ಗ್ರಾಮದ ನಿವಾಸಿ ಕರಿಯಪ್ಪ ಸಾಲ್ಯಾನ್ (77) ಎಂದು ಗುರುತಿಸಲಾಗಿದೆ. ಇವರು ಕಳೆದ ಕೆಲವು ವರ್ಷಗಳಿಂದ ಮನೆ ಬಿಟ್ಟು ಬಜ್ಪೆಯ ಆಶ್ರಮವೊಂದರಲ್ಲಿ ವಾಸವಾಗಿದ್ದರು.

ಈ ಸುದ್ದಿಯನ್ನು ಓದಿರಿ: ಕುಮಾರಧಾರ ನದಿಯಿಂದ ಅಕ್ರಮ ಮರಳು ಸಾಗಾಟ |ಪಿಕ್‌ಅಪ್ ವಾಹನ ಜಪ್ತಿ | Subramanya Sand Theft Case

kadaba times
kadaba times

ಘಟನೆಯ ವಿವರ: ಕರಿಯಪ್ಪ ಸಾಲ್ಯಾನ್ ಅವರು ಸೊಂಟ ಮತ್ತು ಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಕಾಲಕಾಲಕ್ಕೆ ಸುಬ್ರಹ್ಮಣ್ಯ ಸಮೀಪದ ಯೆನೆಕಲ್ಲಿನ ಶ್ರೀನಿವಾಸ ಎಂಬುವವರ ಮನೆಗೆ ಬರುತ್ತಿದ್ದರು. ಅದರಂತೆ ಜನೆವರಿ 23ರಂದು ಅವರು ಶ್ರೀನಿವಾಸರವರ ಮನೆಯಲ್ಲಿದ್ದಾಗ, ಮಧ್ಯರಾತ್ರಿ ಸುಮಾರು 12:30 ಗಂಟೆಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ.

ಈ ಸುದ್ದಿಯನ್ನು ಓದಿರಿ: ಕಡಬ: ಹಿಂದೂ ರುದ್ರಭೂಮಿಯಲ್ಲಿ ಅಶುಚಿತ್ವದ ತಾಂಡವ: ಪ.ಪಂ ನಿರ್ಲಕ್ಷ್ಯಕ್ಕೆ ಆಕ್ರೋಶ

ತಕ್ಷಣ ಅವರನ್ನು 108 ಅಂಬುಲೆನ್ಸ್ ಮೂಲಕ ಕಡಬ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.  ಈ ಕುರಿತು ಮೃತರ ಪುತ್ರ ಹರೀಶ್ ಅವರು ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ UDR ನಂಬ್ರ: 03/2026, ಕಲಂ: 194 BNSS ರಂತೆ ಪ್ರಕರಣ ದಾಖಲಾಗಿದೆ.

Related Articles

Latest Articles