ಕಡಬ: ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಬಳಿಕ ತಡವಾಗಿ ಎಚ್ಚೆತ್ತ ಅಧಿಕಾರಿಗಳು

ಚರಂಡಿಗೆ ಕುಸಿದಿದ್ದ ತಡೆಗೋಡೆ ತೆರವು ಕಾರ್ಯಾಚರಣೆ ಆರಂಭ

kadaba times

ಕಡಬ-ಪಂಜ ರಸ್ತೆಯ ವಿದ್ಯಾನಗರದ ಖಾಸಗಿ ಶಾಲೆ ಬಳಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡು ಚರಂಡಿಗೆ ಕುಸಿದಿದ್ದ ತಡೆಗೋಡೆ ತೆರವಿಗೆ ಅಧಿಕಾರಿಗಳು ಮುಂದಾಗಿದ್ದಾರೆ. ಜಿಲ್ಲಾಧಿಕಾರಿಗಳ ಸೂಚನೆ ಹಾಗೂ ಸಾರ್ವಜನಿಕರ ದೂರಿನ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ

kadaba times
uniq

ಕಡಬ: ಕಡಬ-ಪಂಜ ರಸ್ತೆಯ ವಿದ್ಯಾನಗರದ ಖಾಸಗಿ ಶಾಲೆಯ ಬಳಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡು ಕಳೆದ ಒಂದು ವರ್ಷದಿಂದ ಚರಂಡಿಗೆ ಕುಸಿದು ಬಿದ್ದಿದ್ದ ಬೃಹತ್ ತಡೆಗೋಡೆಯನ್ನು ತೆರವುಗೊಳಿಸಲು ಅಧಿಕಾರಿಗಳು ಕೊನೆಗೂ ಮುಂದಾಗಿದ್ದಾರೆ.  ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ನೀಡಿದ ದೂರು ಹಾಗೂ ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಈ ಸುದ್ದಿಯನ್ನು ಓದಿರಿ:Online Fraud|ಆಫರ್ ನಂಬಿ ಪಾರ್ಸೆಲ್ ಬುಕ್ ಮಾಡಿದ ಕಡಬದ ಯುವಕನಿಗೆ ಕಾದಿತ್ತು ಶಾಕ್!

ತಾಲ್ಲೂಕು ಪಂಚಾಯತ್ ಅನುದಾನದಲ್ಲಿ ಖಾಸಗಿ ಶಾಲೆಯ ಆವರಣ ಜರಿಯದಂತೆ ಈ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಆದರೆ, ಸಮರ್ಪಕ ಯೋಜನೆ ಹಾಗೂ ವೈಜ್ಞಾನಿಕ ಕ್ರಮಗಳಿಲ್ಲದೆ ನಿರ್ಮಾಣಗೊಂಡಿದ್ದ ಕಾರಣ, ಮಣ್ಣು ಜರಿಯುವುದರ ಜೊತೆಗೆ ಇಡೀ ತಡೆಗೋಡೆಯೇ ಚರಂಡಿಗೆ ಮಗುಚಿ ಬಿದ್ದಿತ್ತು. ಸುಮಾರು ಒಂದು ವರ್ಷ ಕಳೆದರೂ ಇದನ್ನು ತೆರವುಗೊಳಿಸದ ಕಾರಣ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ರಸ್ತೆಯಲ್ಲೇ ಹರಿಯುತ್ತಿತ್ತು.

ಈ ತಡೆಗೋಡೆ ಬಿದ್ದಿರುವ ಜಾಗವು ರಸ್ತೆಯ ತಿರುವಿನಲ್ಲೇ ಇರುವುದರಿಂದ ವಾಹನ ಸವಾರರಿಗೆ ಅಪಘಾತದ ಭೀತಿ ಎದುರಾಗಿತ್ತು. ಇತ್ತೀಚೆಗೆ ಕಡಬ-ಪಂಜ ರಸ್ತೆ ದುರಸ್ತಿ ನಡೆದಿದ್ದರೂ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು “ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ” ಎಂಬ ಕಾರಣ ನೀಡಿ ಈ ಸಮಸ್ಯೆಯನ್ನು ನಿರ್ಲಕ್ಷಿಸಿದ್ದರು.

kadaba times
kadaba times

ಈ ಸುದ್ದಿಯನ್ನು ಓದಿರಿ: ಕಡಬ: ಮದುವೆಯಾಗದ ಚಿಂತೆಯಲ್ಲಿ ವಿಷ ಸೇವಿಸಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

ಈ ಬಗ್ಗೆ ‘ಕಡಬ ಟೈಮ್ಸ್’ ವಿಸ್ತೃತ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು. ಜೊತೆಗೆ  ಸಾಮಾಜಿಕ ಕಾರ್ಯಕರ್ತರೊಬ್ಬರು  ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದರು. ಎಚ್ಚೆತ್ತ ಅಧಿಕಾರಿಗಳು ಮೊದಲಿಗೆ ಕುಸಿದ ಗೋಡೆಯನ್ನು ಯಥಾಸ್ಥಿತಿಯಲ್ಲಿ ಮರು ಸ್ಥಾಪಿಸಲು ಪ್ರಯತ್ನಿಸಿದರೂ ಅದು ಫಲಪ್ರದವಾಗಲಿಲ್ಲ. ಈಗ ಜೆಸಿಬಿ ಮೂಲಕ ಬೃಹತ್ ಗಾತ್ರದ ಗೋಡೆಯನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಈ ತೆರವು ಕಾರ್ಯಾಚರಣೆಯಿಂದಾಗಿ ರಸ್ತೆಯ ತಿರುವಿನಲ್ಲಿ ವಾಹನ ಸಂಚಾರಕ್ಕೆ ಎದುರಾಗಿದ್ದ ಅಡ್ಡಿ ಹಾಗೂ ಮಳೆ ನೀರು ಹರಿಯುವಿಕೆಯ ಸಮಸ್ಯೆ ಬಗೆಹರಿದಂತಾಗಿದೆ.

Related Articles

Latest Articles