BIG BREAKING:ಬೆಳ್ಳಂಬೆಳಗ್ಗೆ ಧನುಪೂಜೆಗೆ ಹೋದ ಬಾಲಕ ನಾಪತ್ತೆ; ರಕ್ತದ ಕಲೆ ಪತ್ತೆ, ಚಿರತೆ ದಾಳಿ ಶಂಕೆ?

kadaba times

ಬೆಳ್ತಂಗಡಿಯ ನಾಳದಲ್ಲಿ 9ನೇ ತರಗತಿ ವಿದ್ಯಾರ್ಥಿ ಸುಮಂತ್ ನಿಗೂಢವಾಗಿ ನಾಪತ್ತೆಯಾಗಿದ್ದಾನೆ. ತೋಟದ ಕೆರೆ ಬಳಿ ರಕ್ತದ ಕಲೆಗಳು ಪತ್ತೆಯಾಗಿದ್ದು, ಚಿರತೆ ದಾಳಿಯ ಆತಂಕ ಎದುರಾಗಿದೆ. ಅರಣ್ಯ ಇಲಾಖೆ ಹಾಗೂ ಪೊಲೀಸರಿಂದ ಶೋಧ ಕಾರ್ಯ ಪ್ರಗತಿಯಲ್ಲಿದೆ

kadaba times
uniq

ಪ್ರಮುಖ ಸುದ್ದಿ:  ಧನುರ್ಮಾಸದ ಪೂಜೆಗಾಗಿ ದೇವಸ್ಥಾನಕ್ಕೆ ಹೊರಟಿದ್ದ 9ನೇ ತರಗತಿಯ ವಿದ್ಯಾರ್ಥಿಯೋರ್ವ ನಿಗೂಢವಾಗಿ ನಾಪತ್ತೆಯಾದ ಘಟನೆ ಜನೆವರಿ 14ರ ಬುಧವಾರ ಮುಂಜಾನೆ ಬೆಳ್ತಂಗಡಿ ತಾಲೂಕಿನ ನಾಳ ಎಂಬಲ್ಲಿ ಸಂಭವಿಸಿದೆ. ನಾಪತ್ತೆಯಾದ ಬಾಲಕನ ದಾರಿಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿರುವುದು ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ.

ಕುವೆಟ್ಟು ಗ್ರಾಮದ ಸಂಬೋಳ್ಯ ಬರಮೇಲು ನಿವಾಸಿ ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ, ಗೇರುಕಟ್ಟೆ ಪ್ರೌಢಶಾಲೆಯ ವಿದ್ಯಾರ್ಥಿ ಸುಮಂತ್ (15) ನಾಪತ್ತೆಯಾದ ಬಾಲಕ. ಪ್ರತಿದಿನದಂತೆ ಸುಮಂತ್ ಮತ್ತು ಆತನ ಇಬ್ಬರು ಗೆಳೆಯರು ನಾಳ ದೇವಸ್ಥಾನದ ಧನುಪೂಜೆಗೆ ತೆರಳುತ್ತಿದ್ದರು. ಇಂದು ಮುಂಜಾನೆ ಸುಮಂತ್ ಮನೆಯಿಂದ ಹೊರಡುವುದು ಸ್ವಲ್ಪ ತಡವಾಗಿತ್ತು. ಈ ಹಿನ್ನೆಲೆಯಲ್ಲಿ ಆತನ ಗೆಳೆಯರು ದಾರಿಯಲ್ಲಿ ಕಾದಿದ್ದು, ಬಳಿಕ ದೇವಸ್ಥಾನಕ್ಕೆ ತೆರಳಿದ್ದರು.

ಆದರೆ, ಸುಮಂತ್ ದೇವಸ್ಥಾನಕ್ಕೆ ತಲುಪದಿದ್ದಾಗ ಸಂಶಯಗೊಂಡ ಗೆಳೆಯರು ಆತನ ಮನೆಗೆ ಫೋನ್ ಮಾಡಿ ವಿಚಾರಿಸಿದ್ದಾರೆ. ಮನೆಯವರು ಸುಮಂತ್ ಈಗಾಗಲೇ ಹೊರಟಿದ್ದಾನೆ ಎಂದು ತಿಳಿಸಿದಾಗ ಆತಂಕ ಶುರುವಾಗಿದೆ. ತಕ್ಷಣವೇ ಹುಡುಕಾಟ ಆರಂಭಿಸಿದಾಗ, ಬಾಲಕ ಬರುವ ದಾರಿಯ ತೋಟವೊಂದರ ಕೆರೆ ಬಳಿ ರಕ್ತದ ಕಲೆಗಳು ಪತ್ತೆಯಾಗಿವೆ.

kadaba times
kadaba times

ಮಚ್ಚಿನ ಮತ್ತು ನಾಳ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಓಡಾಟ ಇರುವುದು ಕಂಡುಬಂದಿತ್ತು. ಕೆರೆ ಬಳಿ ರಕ್ತದ ಕಲೆಗಳು ಕಾಣಿಸಿಕೊಂಡಿರುವುದರಿಂದ, ಬಾಲಕನ ಮೇಲೆ ಚಿರತೆ ದಾಳಿ ಮಾಡಿರಬಹುದೇ ಎಂಬ ಬಲವಾದ ಸಂಶಯ ವ್ಯಕ್ತವಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದ್ದಾರೆ. ಸ್ಥಳೀಯ ನೂರಾರು ಗ್ರಾಮಸ್ಥರು ಕೂಡ ಹುಡುಕಾಟದಲ್ಲಿ ಕೈಜೋಡಿಸಿದ್ದಾರೆ. ಕೆರೆ ಹಾಗೂ ಸುತ್ತಮುತ್ತಲಿನ ಕುರುಚಲು ಕಾಡಿನಲ್ಲಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಬಾಲಕನ ನಾಪತ್ತೆಯಿಂದ ಇಡೀ ಗ್ರಾಮದಲ್ಲಿ ಭಯ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ.

Related Articles

Latest Articles