ನಾಲ್ಕೇ ತಿಂಗಳಿಗೆ ನಂದಿದ ರಾಮಕುಂಜದ ನವವಿವಾಹಿತೆಯ ಬದುಕಿನ ಹಣತೆ

kadaba times

ಕಡಬ: ಹಸೆಮಣೆ ಏರಿ ಹೊಸ ಬದುಕಿನ ಕನಸು ಕಾಣಬೇಕಿದ್ದ ಕಣ್ಣುಗಳಲ್ಲಿ ಈಗ ಕಣ್ಣೀರು ಮಾತ್ರ ಬಾಕಿ ಉಳಿದಿದೆ. ಅಪ್ಪ-ಅಮ್ಮನ ಪ್ರೀತಿಯ ಮಗಳಾಗಿ, ಪತಿಯ ಬಾಳ ಸಂಗಾತಿಯಾಗಿ ನಾಲ್ಕೇ ತಿಂಗಳ ಹಿಂದೆ ದಾಂಪತ್ಯಕ್ಕೆ ಕಾಲಿಟ್ಟಿದ್ದ ಯುವತಿಯೊಬ್ಬಳು ಅಕಾಲಿಕವಾಗಿ ಇಹಲೋಕ ತ್ಯಜಿಸಿದ ಘಟನೆ ಕಡಬ ತಾಲೂಕಿನ ಕುಟ್ರುಪ್ಪಾಡಿಯಲ್ಲಿ ನಡೆದಿದೆ.

kadaba times
uniq

ಕುಟ್ರುಪ್ಪಾಡಿ ಗ್ರಾಮದ ಶಿವಪ್ರಸಾದ್ ಅವರ ಪುತ್ರಿ ಶಿಲ್ಪಾ (28) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಕೇವಲ ನಾಲ್ಕು ತಿಂಗಳ ಹಿಂದೆಯಷ್ಟೇ ಮನೋಜ್ ಎಂಬುವವರ ಜೊತೆ ರಿಜಿಸ್ಟರ್ ವಿವಾಹವಾಗಿದ್ದ ಶಿಲ್ಪಾ, ರಾಮಕುಂಜದಲ್ಲಿ ಪತಿಯೊಂದಿಗೆ ವಾಸವಿದ್ದರು. ಪ್ರತಿದಿನ ಕಡಬಕ್ಕೆ ಕೆಲಸಕ್ಕೆ ಹೋಗಿ ಬರುತ್ತಿದ್ದ ಶಿಲ್ಪಾ ಅವರ ಬದುಕಿನಲ್ಲಿ ಅದೆಂತಹ ನೋವಿತ್ತೋ ತಿಳಿಯದು, ಆದರೆ ಜನವರಿ 8ರಂದು ಅವರು ತೆಗೆದುಕೊಂಡ ಆ ಒಂದು ನಿರ್ಧಾರ ಎರಡು ಕುಟುಂಬಗಳನ್ನು ಕತ್ತಲಿಗೆ ತಳ್ಳಿದೆ.

ನಡೆದಿದ್ದೇನು?: ಜನೆವರಿ 8ರಂದು ಸಂಜೆ ಶಿಲ್ಪಾ ತನ್ನ ತಂದೆಯ ಮನೆಯಲ್ಲಿದ್ದಾಗ ವಿಷ ಸೇವಿಸಿದ್ದಾರೆ. ತಕ್ಷಣವೇ ಅವರನ್ನು ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರಿಸ್ಥಿತಿ ಗಂಭೀರವಾಗಿದ್ದರಿಂದ ಮಂಗಳೂರಿನ ವೆನ್ಲಾಕ್ ಹಾಗೂ ನಂತರ ಎನೆಪೋಯ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಯಿತು. ಆದರೆ, ವಿಧಿಯ ಆಟ ಬೇರೆಯೇ ಇತ್ತು. ಚಿಕಿತ್ಸೆ ಫಲಕಾರಿಯಾಗದೆ ಜನೆವರಿ 9ರಂದು ಮಧ್ಯಾಹ್ನ ಶಿಲ್ಪಾ ಕೊನೆಯುಸಿರೆಳೆದಿದ್ದಾರೆ.

kadaba times
kadaba times

 ಈ ಕುರಿತು ಮೃತರ ತಂದೆ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿನ ಹಿಂದಿನ ನಿಖರ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ. ಮದುವೆಯ ಸಂಭ್ರಮ ಮಾಸುವ ಮುನ್ನವೇ ನಡೆದ ಈ ಘಟನೆ ರಾಮಕುಂಜ ಹಾಗೂ ಕುಟ್ರುಪ್ಪಾಡಿ ಗ್ರಾಮಸ್ಥರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.

Related Articles

Latest Articles