ಸುಬ್ರಹ್ಮಣ್ಯ: ಸಾಕು ಕೋಳಿ ಪಕ್ಕದ ಮನೆಯವರ ಜಾಗಕ್ಕೆ ಹೋದ ವಿಚಾರ: ಪ್ರಶ್ನಿಸಿದ ಹಿರಿಯ ವ್ಯಕ್ತಿಯ ಮೇಲೆ ಹಲ್ಲೆ ಆರೋಪ

kadaba times

ತನ್ನ ಸಾಕು ಕೋಳಿಯನ್ನು ಪಕ್ಕದ ಮನೆಯವರು ಓಡಿಸಿದನ್ನು ಪ್ರಶ್ನಿಸಿದಕ್ಕೆ ಮೂವರು ಹಲ್ಲೆ ಮಾಡಿರುವ ಆರೋಪದ ಹಿನ್ನೆಲೆ ಮೂವರ ವಿರುದ್ದ ಸುಬ್ರಹ್ಮಣ್ಯ ಪೊಲೀಸ್‌ ಠಾಣೆ   ಅ.ಕ್ರ ನಂಬ್ರ  :66/2025  ಕಲಂ: 118(1), 3(5)BNS-2023 ಯಂತೆ ಪ್ರಕರಣ ದಾಖಲಾಗಿರುತ್ತದೆ.

kadaba times
uniq

ಸುಬ್ರಹ್ಮಣ್ಯ: ಸಾಕು ಕೋಳಿ ಪಕ್ಕದ ಮನೆಯವರ ಜಾಗಕ್ಕೆ ಹೋದ ಕಾರಣ  ಓಡಿಸಿದ ವಿಚಾರಕ್ಕೆ ಸಂಬಂಧಿಸಿ ಪರಸ್ಪರ ಮಾತಿಗಿಳಿದು ವ್ಯಕ್ತಿಯೊಬ್ಬರಿಗೆ ಹಲ್ಲೆ  ನಡೆಸಿದ ಆರೋಪದ ಮೇರೆಗೆ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಓದಿರಿ:ಗುಂಡ್ಯದಲ್ಲಿ ನಿಲ್ಲಿಸಿದ್ದ ಆಂಬ್ಯುಲೆನ್ಸ್ ಕಳ್ಳತನ ಪ್ರಕರಣ:ಆರೋಪಿಯನ್ನು ಹಾಸನದಲ್ಲಿ ಸೆರೆ ಹಿಡಿದ ಪೊಲೀಸರು

ಸುಳ್ಯ ತಾಲೂಕು ನಾಲ್ಕೂರು ಗ್ರಾಮದದ ನಿವಾಸಿ ಸುಮಾರು 71  ವರ್ಷದ ಹಿರಿಯ ವ್ಯಕ್ತಿ ಗುರುವ ಎಂಬವರು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದು ಅದರಂತೆ ಮೂವರ ವಿರುದ್ದ ಕೇಸು ದಾಖಲಾಗಿದೆ.

ಡಿ.19 ರಂದು ದೂರುದಾರರ ಕೋಳಿ ಪಕ್ಕದಲ್ಲೇ ಇರುವ ಸಂಬಂಧಿಕರ ಮನೆ ಜಾಗಕ್ಕೆ ಹೋದ ಕಾರಣ ಅಲ್ಲಿದ್ದವರು  ಅಲ್ಲಿದ ಓಡಿಸಿದ್ದಾರೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ಹಿರಿಯ ವ್ಯಕ್ತಿಗೆ   ಅವರ  ಅಕ್ಕನ ಮಗ ಬೋಜಪ್ಪ ಆತನ ಪತ್ನಿ ಅನಿತಾ, ನಾದಿನಿ ಪ್ರೇಮಾ ಎಂಬವರು ಸೇರಿ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.

kadaba times
kadaba times

ಈ ಸುದ್ದಿಯನ್ನು ಓದಿರಿ: 2ನೇ ದಿನವೂ ಕೋಳಿ ಅಂಕ; ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಸಹಿತ 27 ಮಂದಿಯ ವಿರುದ್ಧ ಕೇಸ್

ಹಲ್ಲೆಗೊಳಾದ ವ್ಯಕ್ತಿಯನ್ನು ಚಿಕಿತ್ಸೆಗಾಗಿ  ಆಟೋ ರಿಕ್ಷಾದಲ್ಲಿ ಕರೆದುಕೊಂಡು ಹೋಗಿದ್ದು, ಗುತ್ತಿಗಾರುಗೆ ತಲುಪುತ್ತಿದ್ದಂತೆ ಅಲ್ಲಿಗೆ ಬಂದ ಅಂಬ್ಯುಲೆನ್ಸ್‌ ನಲ್ಲಿ ಸುಳ್ಯದ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದು, ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ.

ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆ   ಅ.ಕ್ರ ನಂಬ್ರ  :66/2025  ಕಲಂ: 118(1), 3(5)BNS-2023 ಯಂತೆ ಪ್ರಕರಣ ದಾಖಲಾಗಿರುತ್ತದೆ.

Related Articles

Latest Articles