ಪಂಜ: ಗ್ರಾ.ಪಂ. ಸಿಬ್ಬಂದಿಯಿಂದ ಹಣ ದುರುಪಯೋಗ ಪ್ರಕರಣ: ಪಿಡಿಒ ಸಹಿತ ಮೂವರ ವಿರುದ್ಧ ತಾ.ಪಂ. ಇಒ, ಸುಬ್ರಹ್ಮಣ್ಯ ಠಾಣೆಗೆ ದೂರು

kadaba times

ಸುಳ್ಯ: ಪಂಜ ಗ್ರಾ.ಪಂ. ಸಿಬಂದಿಯೋರ್ವರು ಗ್ರಾ.ಪಂ.ನ ಹಣವನ್ನು ದುರುಪಯೋಗ ಪಡಿಸಿದ ಬಗ್ಗೆ ಸಿಬಂದಿ ವಿರುದ್ಧ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜತೆಗೆ ಆರೋಪಿತ ಸಿಬಂದಿ ಪಿಡಿಒ ಸಹಿತ ಮೂವರ ವಿರುದ್ಧ ತಾ.ಪಂ. ಇಒ, ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದಾರೆ.

kadaba times
uniq

ಪಂಜ ಗ್ರಾ.ಪಂ.ನ ಸಿಬಂದಿ ಬಾಬು ಅವರು ಸಾರ್ವಜನಿಕರಿಂದ ಸಂಗ್ರಹಿಸಿದ 13.94 ಲಕ್ಷ ಹಣವನ್ನು ಬ್ಯಾಂಕ್‌ಗೆ ಜಮೆ ಮಾಡದೆ ದುರುಪಯೋಗಪಡಿಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಗ್ರಾ.ಪಂ. ವಿಚಾರಣೆಯನ್ನು ಕಾಯ್ದಿರಿಸಿ ಮುಂದಿನ ಆದೇಶದ ವರೆಗೆ ಕರ್ತವ್ಯದಿಂದ ಅಮಾನತು ಮಾಡಿದ್ದರು. ಹಾಗೂ ಸುಬ್ರಹ್ಮಣ್ಯ ಠಾಣೆಗೆ ಗ್ರಾ.ಪಂ. ಪಿಡಿಒ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

kadaba times
kadaba times

ಮೂವರ ವಿರುದ್ಧ ಠಾಣೆ, ಇಒಗೆ ದೂರು: ಪ್ರಕರಣದ ಆರೋಪಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಮಾನತುಗೊಳಿಸಿರುವ ಕುರಿತು, ಜಾತಿ ನಿಂದನೆ, ಜೀವಬೆದರಿಕೆ, ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ಹಿಂಸೆ ಹಾಗೂ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ  ಗ್ರಾ.ಪಂ. ಪಿಡಿಒ ಜಯಂತ್‌ ಯು.ಬಿ., ಕಾರ‍್ಯದರ್ಶಿ ಸೀತಾರಾಮ, ಉಪಾಧ್ಯಕ್ಷ ನಾರಾಯಣ ಅವರ ವಿರುದ್ಧ ಸುಬ್ರಹ್ಮಣ್ಯ ಠಾಣೆಗೆ ಹಾಗೂ ಸುಳ್ಯ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಅವರಿಗೆ ದೂರು ನೀಡಿದ್ದಾರೆ.

Related Articles

Latest Articles