
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಇಂಜಾಡಿ ಬಳಿ ವ್ಯಕ್ತಿಯೊಬ್ಬರ ಶವ ನ.12 ಮುಂಜಾನೆ ರಸ್ತೆ ಬದಿ ಪತ್ತೆಯಾಗಿದೆ.


ಸುಳ್ಯ ಕುದ್ಪಾಜೆ ನಿವಾಸಿ ಹರೀಶ ಎಂಬವರು ಮೃತ ಪಟ್ಟ ವ್ಯಕ್ತಿ ಎಂದು ತಿಳಿದು ಬಂದಿದೆ.
ತೊಡಿಕಾನ ಮತ್ತಿತರ ಕಡೆಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು ಎನ್ನಲಾಗಿದೆ. ಇದೀಗ ಮೃತರ ಮನೆಯವರನ್ನು ಪೋಲೀಸರು ಸಂಪರ್ಕಿಸಿದ್ದು ಮನೆಯವರು ಸುಬ್ರಹ್ಮಣ್ಯ ಕ್ಕೆ ತೆರಳಿರುವುದಾಗಿ ತಿಳಿದು ಬಂದಿದೆ.


ಮೃತ ದೇಹ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿದೆ.ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ.
