ಕೈಗಾರಿಕೆಗಳಿಗೆ ಎತ್ತಿನ ಹೊಳೆಯ ನೀರನ್ನು ಕೊಂಡು ಹೋಗುವ ಯೋಜನೆಗೆ ವಿರೋಧ ವ್ಯಕ್ತ ಪಡಿಸಿದ ಶಾಸಕ ಅಶೋಕ್‌ ಕುಮಾರ್‌ ರೈ

ಉಪ್ಪಿನಂಗಡಿ, ಕುಮಾರಧಾರಾ ನದಿಗಳಿಗೆ ಆಣೆಕಟ್ಟು ನಿರ್ಮಿಸಿ ಅಂತರ್ಜಲ ವೃದ್ಧಿಗೆ ಕ್ರಮ ಕೈಗೊಳ್ಳಬೇಕು

kadaba times

ಕಡಬ ಟೈಮ್ಸ್, ಪ್ರಮುಖ ಸುದ್ದಿ:   ಎತ್ತಿನಹೊಳೆ ಯೋಜನೆಯ ನೀರನ್ನು ಬೆಂಗಳೂರಿನ ಕೈಗಾರಿಕೆಗಳಿಗೆ ಬಲಸುವ ರಾಜ್ಯ ಸರಕಾರದ ಪ್ರಸ್ತಾವಕ್ಕೆ ಆಡಳಿತ ಪಕ್ಷದ  ಶಾಸಕ ಅಶೋಕ್‌ ಕುಮಾರ್‌ ರೈ ವಿರೋಧ ವ್ಯಕ್ತಪಡಿಸಿದ್ದಾರೆ.

kadaba times
uniq

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮವಾಹಿನಿ ಯೋಜನೆಗೆ ಅನುದಾನ ನೀಡಿ, ಕಾಮಗಾರಿ ಪೂರ್ಣಗೊಂಡು, ಇಲ್ಲಿ ಸಾಕಷ್ಟು ನೀರು ಶೇಖರಣೆಗೆ ವ್ಯವಸ್ಥೆಯಾದ ಬಳಿಕ ಯೋಚಿಸಲಿ. ಕುಡಿಯಲು ನೀರು ಕೊಡಲು ವಿರೋಧವಿಲ್ಲ, ಕೈಗಾರಿಕೆಗಳಿಗೆ ಸಮ್ಮತಿ ಇಲ್ಲ ಎಂದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಫೆಬ್ರವರಿ, ಮಾರ್ಚ್‌ ನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ. ಕೊಳವೆ ಬಾವಿಗಳು ಬತ್ತಿವೆ. ಹಾಗಾಗಿ ಕೈಗಾರಿಕೆಗಳಿಗೆ ಎತ್ತಿನ ಹೊಳೆಯ ನೀರನ್ನು ಕೊಂಡು ಹೋಗುವ ಯೋಜನೆಗೆ ನಮ್ಮ ವಿರೋಧವಿದೆ ಎಂದ ಅವರು, ಅದಕ್ಕಿಂತ ಮೊದಲು ಪಶ್ಚಿಮವಾಹಿನಿ ಯೋಜನೆಗೆ ಎತ್ತಿನಹೊಳೆಯಷ್ಟೇ ಅನುದಾನ ಬಿಡುಗಡೆ ಮಾಡಬೇಕು. ಉಪ್ಪಿನಂಗಡಿ, ಕುಮಾರಧಾರಾ ನದಿಗಳಿಗೆ ಆಣೆಕಟ್ಟು ನಿರ್ಮಿಸಿ, ನಮ್ಮಲ್ಲಿ ಸಾಕಷ್ಟು ನೀರು ಶೇಖರಿಸಿ ಅಂತರ್ಜಲ ವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

kadaba times
kadaba times

ಎತ್ತಿನಹೊಳೆ ಯೋಜನೆ ಬಿಜೆಪಿಯ ಡಿ.ವಿ ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದಾಗ ಜಾರಿಯಾಗಿದೆ. ಆಗ ಜಿಲ್ಲೆಯ ಬಿಜೆಪಿ ಜನಪ್ರತಿನಿಧಿಗಳು ಇಲ್ಲಿ ಪ್ರತಿಭಟಿಸಿದ್ದರು. ಮತ್ತೆ ಬಿಜೆಪಿ ಸರಕಾರ ಬಂದಾಗ ಆ ಯೋಜನೆಗೆ 13 ಸಾವಿರ ಕೋಟಿ ರೂ. ನೀಡಿತು. ಅದು ರಾಜಕೀಯದ ತಂತ್ರ ಎಂದು ಅವರು ಟೀಕಿಸಿದರು.

Related Articles

Latest Articles