ಕಡಬ ಪೇಟೆಯ ರಸ್ತೆ ಬದಿ ಮತ್ತು ಪುಟ್ ಪಾತ್ ನಲ್ಲೇ ಅಂಗಡಿಗಳು

kadaba times

ಕಡಬ: ಕಡಬ ಮುಖ್ಯ ಪೇಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ರಸ್ತೆ ಬದಿ ಮತ್ತು ಪುಟ್  ಗಳಲ್ಲೇ   ಅನಧಿಕೃತ ಅಂಗಡಿಗಳು ಕಾರ್ಯಾಚರಿಸುತ್ತಿದೆ.  ಇವುಗಳು ವಾಹನಗಳ ಸುಗಮ ಸಂಚಾರ ಮತ್ತು ಅಪಘಾತಗಳಿಗೆ ಕಾರಣವಾಗುತ್ತಿದೆ. ನಿಯಮ ಮೀರಿ ರಸ್ತೆ ಬದಿ ಮತ್ತು ಪುಟ್ ಪಾತ್ ಗಳಲ್ಲಿ ಇರುವ ಅಂಗಡಿಗಳ ಮಾಲಕರಿಗೆ ಯಾವುದೇ ಸೂಚನೆ ನೀಡುವ ಕೆಲಸ ಪ.ಪಂ ನಿಂದ ಆಗಿಲ್ಲ.

kadaba times
uniq

ಗೂಡಂಗಡಿಗೆ ಬರುವ ಬಹುತೇಕ  ಗ್ರಾಹಕರು ತಮ್ಮ ವಾಹನಗಳನ್ನು ರಸ್ತೆ ಬದಿಯಲ್ಲೇ  ಪಾರ್ಕ್ ಮಾಡುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ.  ಮುಖ್ಯ ರಸ್ತೆಯಲ್ಲಿ ಬರುವ ವಾಹನಗಳು ವೇಗದಲ್ಲಿ  ಸಂಚರಿಸುವ ಸಂದರ್ಭ ಕೆಲ ಸಂದರ್ಭದಲ್ಲಿ ಅಪಘಾತವಾಗುವ ಸಾಧ್ಯತೆ ಹೆಚ್ಚಿದೆ. ಕೆಲವು ಸಂದರ್ಭ ಅಪಘಾತವನ್ನು ತಪ್ಪಿಸಲು ಹೋಗಿ ಅವಘಡಗಳು ಸಂಭವಿಸುವ ಸಾಧ್ಯತೆಯೂ ಇದೆ.

ಕಡಬ ಪೇಟೆಯ ಪೊಲೀಸ್ ಠಾಣಾ ಎದುರಿನ ರಸ್ತೆಯ ಎಡ ಮತ್ತು ಬಲ ಭಾಗದಲ್ಲಿ ಪುಟ್ ಪಾತ್ ನಲ್ಲೇ ಅನಧಿಕೃತ  ಅಂಗಡಿಗಳು ತಲೆ ಎತ್ತಿವೆ.  ಪೇಟೆಯುದ್ದಕ್ಕೂ  ಅಲ್ಲಲ್ಲಿ  ಪುಟ್ ಪಾತ್ ನಲ್ಲಿ  ಅಂಗಡಿಯವರ ವಸ್ತುಗಳನ್ನು ಇಡಲಾಗಿದೆ.  ಇವುಗಳನ್ನು ಪ.ಪಂ ತೆರವು ಗೊಳಿಸಿ ವ್ಯಾಪಾರಿಗಳಿಗೂ  ತೊಂದರೆಯಾಗದಂತೆ ಬೇರೆ ಕಡೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕಿದೆ. ರಸ್ತೆ ಬದಿಯಲ್ಲಿರುವ ಬಹುತೇಕ ಗೂಡಂಗಡಿಗಳಿಂದ ಪ.ಪಂ ಕರ ವಸೂಲಿ ಮಾಡುತ್ತಿದೆ.  ಸಾರ್ವಜನಿಕರು ಪುಟ್ ಪಾತ್ ನಲ್ಲಿ ನಡೆದಾಡಲು ಸೂಕ್ತ ಸೂಚನಾ ಫಲಕಗಳನ್ನು  ಅಳವಡಿಸಬೇಕಿದೆ.

kadaba times
kadaba times

ಈ ಬಗ್ಗೆ ಕಡಬ ಟೈಮ್ಸ್ ಗೆ  ಪ್ರತಿಕ್ರಿಯಿಸಿರುವ ಪ.ಪಂ  ಅಧ್ಯಕ್ಷೆ ತಮ್ಮನಾ ಜಬೀನ್ ಅವರು, ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ಬಳಿಕ ಹಲವಾರು ಕ್ರಮಗಳನ್ನು ಹಂತ ಹಂತವಾಗಿ ಅನುಷ್ಠಾನ  ಮಾಡಲಾಗುತ್ತಿದೆ.  ಆಡಳಿತ ಮಂಡಳಿ ಜೊತೆ  ಸಾರ್ವಜನಿಕರು,ವರ್ತಕರು ಸಹಕಾರ ನೀಡಬೇಕು. ಈಗಾಗಲೇ   ಸಾಮಾನ್ಯ ಸಭೆಯಲ್ಲಿ  ಅಭಿವೃದ್ದಿ ಕಾರ್ಯ, ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ. ಮುಂದಿನ ಸಭೆಯಲ್ಲಿ   ನಿಯಮ ಮೀರಿದ ಅಂಗಡಿಗಳಿಗೆ,  ಪುಟ್ ಪಾತ್ ನಲ್ಲಿರುವ ಅಂಗಡಿಯವರಿಗೆ ನೋಟಿಸ್ ನೀಡುವ ಬಗ್ಗೆ ಚರ್ಚಿಸಲಾಗುವುದು  ಎಂದಿದ್ದಾರೆ.

Related Articles

Latest Articles