ಕಡಬ :ಪುಳಿಕುಕ್ಕು ಬಳಿ ರಸ್ತೆ ತಿರುವಿನಲ್ಲಿ ಚರಂಡಿಗೆ ಇಳಿದ ಬಸ್

kadaba times

ಕಡಬ: ಇಲ್ಲಿನ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪುಳಿಕುಕ್ಕು ವಾರ್ಡಿನ ತೆಕ್ಕಡ್ಕ ಸಮೀಪ ವಾಹನಕ್ಕೆ ಸೈಡ್ ಕೊಡುವ ವೇಳೆ ಬಸ್ಸೊಂದು ತಿರುವಿನಲ್ಲಿ ಚರಂಡಿಗೆ ಇಳಿದಿದ್ದು ಪ್ರಯಾಣಿಕರು ಸಹಿತ ಚಾಲಕ ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ.

kadaba times
uniq

ನ.3 ರಂದು ಕಡಬದಿಂದ ಪಂಜ ಮಾರ್ಗವಾಗಿ ಸುಳ್ಯಕ್ಕೆ ಮುಂಜಾನೆ 8:45 ಕ್ಕೆ  ತೆರಳುತ್ತಿದ್ದ ಬಸ್ ಇದಾಗಿದೆ. ಬಸ್ ಚರಂಡಿಗೆ ಬಿದ್ದ ಪ್ರದೇಶದಲ್ಲಿ ಈಗಾಗಲೇ ಹಲವು ಅಪಘಾತಗಳು ಸಂಭವಿಸಿದೆ. ಬೈಕ್ ,ಆಟೋ, ಜೀಪು ಸಹಿತ ಹಲವು ವಾಹನಗಳು ಚರಂಡಿಗೆ ಬಿದ್ದಿದ್ದವು.

ಎರಡು ತಿರುವುಗಳಿದ್ದು ಚರಂಡಿ ಪಕ್ಕ ಪೊದೆಗಳಿಂದ ತುಂಬಿ ಹೋಗಿದೆ . ಘನ ವಾಹನಗಳು ಸಂಚರಿಸುವ ಸಂದರ್ಭ ಈ ತಿರುವಿನಲ್ಲಿ ಜಾಗದ ಕೊರತೆ ಎದುರಾಗುತ್ತದೆ. ಇನ್ನೊಂದು ವಾಹನಕ್ಕೆ ಜಾಗ ಕೊಡುವಾಗ ಘನ ವಾಹನವಾದಲ್ಲಿ ಚರಂಡಿಗೆ ಇಳಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗುತ್ತದೆ.

kadaba times
kadaba times

ಈ ಹಿಂದೆ ಅಪಘಾತ ನಡೆದ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು ಮೋರಿ ಅಳವಡಿಸಿ ರಸ್ತೆಯನ್ನು ನೇರ ಮಾಡುವಂತೆ ಸ್ಥಳೀಯಾಡಳಿತವನ್ನು ಒತ್ತಾಯಿಸಿದ್ದರು.

Related Articles

Latest Articles