ಜನ ನಿಂತಿದ್ದಲ್ಲಿ ಬಸ್ ನಿಲ್ಲಿಸಲ್ಲ,ಇಳಿಯಲು ಸಿದ್ಧರಾದಾಗ ಡೋರ್ ತೆಗೆಯುವುದಿಲ್ಲ- ಪ್ರಯಾಣಿಕರಿಂದ ಡಿಪ್ಪೋ ಮ್ಯಾನೇಜರ್ ಗೆ ದೂರು

kadaba times

ಸುಳ್ಯ: ಪ್ರಯಾಣಿಕರು ನಿಂತಲ್ಲಿ ಬಸ್ ನಿಲ್ಲಿಸದೆ, ಬಸ್ ನಿಂತಾಗ ಇಳಿಯಲು ಸರಿಯಾದ ಸಮಯದಲ್ಲಿ ಬಸ್ ಡೋರ್ ತೆಗೆಯಲು ಅವಕಾಶ ಕೊಡದೆ ಸತಾಯಿಸುತ್ತಿದ್ದ ಆರೋಪದ ಮೇರೆಗೆ ಸುಳ್ಯ  ಕೆ.ಎಸ್.ಆರ್.ಟಿ.ಸಿ ವಿಭಾಗದ ಅಧಿಕಾರಿಗಳು   ಬಸ್ ಡ್ರೈವರ್ ರೂಟ್ ಬದಲಾವಣೆ ಮಾಡಿದ್ದಾರೆ.

kadaba times
uniq

 ಅ.26ರಂದು ಬೆಳಗ್ಗೆ ಕೊಯನಾಡಿನಿಂದ ಸುಳ್ಯಕ್ಕೆ ಬಸ್ ಬರುತ್ತಿರುವಾಗ ಡೋರ್ ತೆಗೆಯದ ವಿಚಾರಕ್ಕೆ ಪ್ರಯಾಣಿಕರೊಂದಿಗೆ ಬಸ್ ನಲ್ಲೇ ವಾಗ್ವಾದ ನಡೆಯಿತೆನ್ನಲಾಗಿದೆ. ಹೀಗಾಗಿ   ಬಸ್ ನಲ್ಲಿದ್ದ ಪ್ರಯಾಣಿಕರು ಪುತ್ತೂರು ಅಧಿಕಾರಿಗಳಿಗೆ, ಸುಳ್ಯ ಡಿಪ್ಪೋ ಮ್ಯಾನೇಜರ್ ರಿಗೆ ದೂರಿಕೊಂಡಿದ್ದರು.

ಪ್ರಯಾಣಿಕರು ಬಸ್‌ನಿಂದ ಇಳಿಯಲು ಕೇಳಿಕೊಂಡರೆ ಬಸ್ ಡೋರ್ ತೆಗೆಯದೇ ಸತಾಯಿಸುತ್ತಿರುವ ಕುರಿತು ಸಾರ್ವಜನಿಕರಿಂದ ಡಿಪ್ಪೋ ಮ್ಯಾನೇಜರ್ ರಿಗೆ ದೂರು ಹೋದ ಪರಿಣಾಮ, ವಿಚಾರಣೆ ‌ನಡೆಸಿದ ಅಧಿಕಾರಿಗಳು ಆ ಡ್ರೈವರ್ ರೂಟ್ ಬದಲಾವಣೆ ಮಾಡಿರುವುದಾಗಿ ತಿಳಿದು ಬಂದಿದೆ.

kadaba times
kadaba times

ಸುಳ್ಯ – ಕೊಯನಾಡು‌ ಬಸ್ ನಲ್ಲಿ ಚಾಲಕ  ಪ್ರಯಾಣಿಕರು ನಿಂತಿದ್ದಲ್ಲಿ ಬಸ್ ‌ನಿಲ್ಲಿಸುವುದಿಲ್ಲ,  ಬಸ್ ನಿಂದ ಇಳಿಯಲು ಪ್ರಯಾಣಿಕರು ಸಿದ್ಧರಾದಾಗ ಬಸ್ ನ ಡೋರ್ ತೆಗೆಯುವುದಿಲ್ಲ ಎಂಬಿತ್ಯಾದಿ ದೂರುಗಳು ಡಿಪ್ಪೋ‌ ಮ್ಯಾನೇಜರ್ ಗೆ ಈ ಹಿಂದೆಯೂ  ಬಂದಿದ್ದವು.

ಈ ಹಿಂದೆ ಡ್ರೈವರ್ ಕಲ್ಲುಗುಂಡಿಯ ಗಫೂರ್ ಎಂಬವರ  ಮೇಲೆ ಬಂದ ದೂರು‌ ಹಾಗೂ ಅ.26ರಂದು ಪ್ರಯಾಣಿಕರು ದೂರಿಕೊಂಡಿರುವ ಮೇರೆಗೆ ಸುಳ್ಯ -ಕೊಯನಾಡು ರೂಟ್ ನಿಂದ ಡ್ರೈವರ್ ನನ್ನು   ಬದಲಾಯಿಸಿದ್ದಾರೆಂದು ತಿಳಿದು ಬಂದಿದೆ .. ಸುಳ್ಯ‌ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು   ಡ್ರೈವರ್ ವಿರುದ್ಧ ದೂರು ಬಂದಿರುವುದು ಹೌದು. ಅದಕ್ಕಾಗಿ ಅವರ ರೂಟ್ ಬದಲಾವಣೆ ಮಾಡಲಾಗಿದೆ ಎಂದು‌ ತಿಳಿಸಿರುವುದಾಗಿ ಸ್ಥಳೀಯ ಮಾಧ್ಯವೊಂದು ಉಲ್ಲೇಖಿಸಿ ವರದಿ ಪ್ರಕಟಿಸಿದೆ.

Related Articles

Latest Articles