ಚಿನ್ನಾಭರಣ- ಎಲೆಕ್ಟ್ರಾನಿಕ್ ಅಂಗಡಿಗಳಿಗೆ ವಂಚನೆ ಮಾಡುತ್ತಿದ್ದ ಮಹಿಳೆಯ ಬಂಧನ

ದ.ಕ ಉಡುಪಿಯ ವಿವಿಧ ಠಾಣೆಗಳಲ್ಲಿ9 ಪ್ರಕರಣ ದಾಖಲಾಗಿತ್ತು

kadaba times

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರತಿಷ್ಠಿತ ಚಿನ್ನಾಭರಣಗಳ ಹಾಗೂ ಎಲೆಕ್ಟ್ರಾನಿಕ್ ಅಂಗಡಿಗಳಿಗೆ ಭೇಟಿ ಮಾಡಿ ತನ್ನ ಮಾತುಗಳಿಂದ ಅಂಗಡಿ ಮಾಲಕರನ್ನು ನಂಬಿಸಿ, ಬೆಲೆಬಾಳುವ ಸೊತ್ತುಗಳನ್ನು ಖರೀದಿಸಿ, ವಿವಿಧ ಬ್ಯಾಂಕ್ ಗಳ ಮಾನ್ಯತೆ ಇಲ್ಲದ ಚೆಕ್ ಗಳನ್ನು ನೀಡಿ ಮೋಸ ಮಾಡುತ್ತಿದ್ದಖತರ್ನಾಕ್ ವಂಚಕಿಯನ್ನು ಬರ್ಕೆ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

kadaba times
uniq

ಮಂಗಳೂರು ತಾಲೂಕು ಕುಪ್ಪೆ ಪದವು ಮುತ್ತೂರು ಗ್ರಾಮದ ಫರಿದಾ ಬೇಗಂ ಯಾನೆ ಫರಿದಾ (28) ಬಂಧಿತ ಆರೋಪಿ. ರವಿವಾರ ಆಕೆಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಧೀಶರು ಆಕೆಗೆ ನ.3ರ ವರೆಗೆ ನ್ಯಾಯಾಗಂ ಬಂಧನ ವಿಧಿಸಿದ್ದಾರೆ.

ಬರ್ಕೆ ಪೊಲೀಸರಿಂದ ಕಾರ್ಯಾಚರಣೆ: ಕಳೆದ ಜೂ. 27ರಂದು ಫರಿದಾ ಬೇಗಂ ತನ್ನ ಪರಿಚಯದ ವ್ಯಕ್ತಿಯೊಬ್ಬರ ಮೂಲಕ ಮಂಗಳೂರಿನ ಕೊಡಿಯಾಲಬೈಲಿನ ಎಂಪಾಯರ್ ಮಾಲ್ ನ ಲ್ಯಾಪ್ ಟಾಪ್ ಮಳಿಗೆಯೊಂದರಿಂದ ಸುಮಾರು 1.98 ಲಕ್ಷ ರೂ. ಮೌಲ್ಯದ ಲ್ಯಾಪ್ ಖರೀದಿಸಿದ್ದಳು. ಆಕೆ ಆಪಲ್ ಕಂಪನಿಯ ಮ್ಯಾಕ್ ಬುಕ್ ಪ್ರೊ ಎ2141 ಲ್ಯಾಪ್ ಟಾಪ್, ಡೆಲ್ ಕಂಪನಿಯ ಡೆಲ್ 5440, ಆಪಲ್ ಕಂಪನಿಯ ಮ್ಯಾಕ್ ಬುಕ್ ಪ್ರೊ 2442 ಲ್ಯಾಪ್ ಟಾಪ್ ಗಳನ್ನು ಖರೀದಿಸಿದ್ದಳು. ಮಾನ್ಯತೆ ಇಲ್ಲದ ಚೆಕ್ ನೀಡಿ ವಂಚಿಸಿದ್ದಳು. ಸಂಸ್ಥೆಯ ಮಾಲಕರು ನೀಡಿದಂತೆ ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಬರ್ಕೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮೋಹನ ಕೊಟ್ಟಾರಿ ಅವರ ನೇತೃತ್ವದಲ್ಲಿ ಪ್ರಕರಣದ ತನಿಖಾಧಿಕಾರಿ ವಿನಾಯಕ ತೊರಗಲ್ ಮತ್ತು ಮಹಿಳಾ ಸಿಬಂದಿ ಕಾರ್ಯಾಚರಣೆ ನಡೆಸಿ, ಆರೋಪಿ ಮಹಿಳೆಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

kadaba times
kadaba times

ಹಲವು ಠಾಣೆಗಳಲ್ಲಿ ಪ್ರಕರಣ: ಬರ್ಕೆ ಪೊಲೀಸ್ ಠಾಣೆಯಲ್ಲಿಮಾತ್ರವಲ್ಲದೆ, ಮಂಗಳೂರು ನಗರದ ಕಾವೂರು ಪೊಲೀಸ್ ಠಾಣೆ, ಬಜಪೆ ಪೊಲೀಸ್ ಠಾಣೆ, ಮೂಡುಬಿದಿರೆ ಪೊಲೀಸ್ ಠಾಣೆ, ಮೂಲ್ಕಿ ಪೊಲೀಸ್ ಠಾಣೆಯಲ್ಲಿ ತಲಾ ಒಂದೊಂದು ಮೋಸ, ವಂಚನೆಯ ಪ್ರಕರಣಗಳು ಮತ್ತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ 3 ಪ್ರಕರಣ ಹಾಗೂ ಉಡುಪಿ ಜಿಲ್ಲೆಯ ಶಿರ್ವ ಪೊಲೀಸ್ ಠಾಣೆಯಲ್ಲಿ ಒಂದು ವಂಚನೆಯ ಪ್ರಕರಣವು ದಾಖಲಾಗಿದೆ.

ನ್ಯಾಯಾಲಯದಿಂದ ವಾರಂಟ್: ಮೂಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ವಂಚನೆ ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದ ಫರೀದಾ ಬೇಗಂ, ಬಳಿಕ ನ್ಯಾಯಾಲಯಕ್ಕೆ ಪ್ರಕರಣದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದಳು. ಹಾಗಾಗಿ ನ್ಯಾಯಾಲಯ ಆಕೆಯ ವಿರುದ್ದ ವಾರೆಂಟ್ ಕೂಡಾ ಹೊರಡಿಸಿತ್ತು. ಕಾವೂರು ಮತ್ತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿದಾಖಲಾದ ಪ್ರಕರಣಗಳಲ್ಲಿ ದಸ್ತಗಿರಿಯಾಗದೆ ತಲೆಮರೆಸಿಕೊಂಡಿದ್ದಳು.

Related Articles

Latest Articles