ಅಕ್ರಮ ಶಸ್ತ್ರಾಸ್ತ್ರ ಕೇಸ್: ಹೈಕೋರ್ಟ್ ಮೆಟ್ಟಿಲೇರಿದ ಮಹೇಶ್ ಶೆಟ್ಟಿ ತಿಮರೋಡಿ

kadaba times

ಅಕ್ರಮ ಶಸ್ತ್ರಾಸ್ತ್ರ ಕೇಸ್ ಗೆ ಸಂಬಂಧಪಟ್ಟಂತೆ  ಸೌಜನ್ಯ ಪರ ಹೋರಾಟಗಾರ  ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

kadaba times
uniq

ದ.ಕ ಜಿಲ್ಲಾ ಪ್ರಧಾನ ಸೆಷನ್ಸ್ ಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರ ಹಿನ್ನೆಲೆ ಅಕ್ಟೋಬರ್ 8 ರಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ‌ ಮಾಡಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಮಾಡಲು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆ ಹಾಗೂ ಎಸ್ಐಟಿ ಎಸ್ಪಿ ಸಿ.ಎ.ಸೈಮನ್ ರನ್ನ ಪ್ರತಿವಾದಿಯನ್ನಾಗಿಸಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಎಫ್ಐಆರ್, ದೂರು ಹಾಗೂ ಮುಂದುವರಿದಿರುವ ಅಪರಾಧ ಕ್ರಮಗಳನ್ನು ರದ್ದುಪಡಿಸಲು ಮನವಿ ಮಾಡಿದ್ದಾರೆ.

ಪ್ರಕರಣ ರದ್ದು ಪಡಿಸಿ ಮುಂದಿನ ಎಲ್ಲಾ ಕ್ರಮಗಳಿಗೆ ತಡೆ ನೀಡಲು ತಿಮರೋಡಿ ಪರ ವಕೀಲರ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಗುರುವಾರ ಮಂಗಳೂರು ಕೋರ್ಟ್ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿತ್ತು. ಇದರ ಬೆನ್ನಲೇ ಹೈಕೋರ್ಟ್ ಮೊರೆ ಹೋಗಿದ್ದಾರೆ.

kadaba times
kadaba times

ಮತ್ತೊಂದು ಗಡಿಪಾರು ಆದೇಶ ತಡೆ ಕೋರಿದ್ದ ಪ್ರಕರಣ ಕೂಡ ಹೈಕೋರ್ಟ್ ನಲ್ಲಿ ಅ.13 ರಂದು ವಿಚಾರಣೆಗೆ ಬಂತು. ಈ ವಿಚಾರಣೆಯ ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದೆ. ಮುಂದಿನ ಆದೇಶದವರೆಗೂ ತಿಮರೋಡಿಗೆ ಬಲವಂತದ ಕ್ರಮ ಬೇಡ ಎಂದು ಹೈಕೋರ್ಟ್ ನ್ಯಾಯಪೀಠ ತಿಳಿಸಿದೆ. ಕಳೆದ 25 ದಿನಗಳಿಂದ ಮಹೇಶ್ ಶೆಟ್ಟಿ ತಿಮರೋಡಿ ತಲೆ ಮರೆಸಿಕೊಂಡಿದ್ದಾರೆ.

 

Related Articles

Latest Articles