ನೆಲ್ಯಾಡಿ ಬಳಿ ತಡ ರಾತ್ರಿ ಖಾಸಗಿ ಬಸ್ಸು – ಲಾರಿ ನಡುವೆ ಡಿಕ್ಕಿ

kadaba times

ಕಡಬ ಟೈಮ್ಸ್, ನೆಲ್ಯಾಡಿ:  ಖಾಸಗಿ ಬಸ್ಸು – ಲಾರಿ ನಡುವೆ ಡಿಕ್ಕಿ ಸಂಭವಿಸಿ ಎರಡು ವಾಹನಗಳೂ ಜಖಂಗೊಂಡು, ಬಸ್ಸಿನ ಎಡಬದಿ ಸೀಟಿನಲ್ಲಿ ಕುಳಿತಿದ್ದ ಸಹಚಾಲಕ ಗಾಯಗೊಂಡ ಘಟನೆ ಅ.8 ರ ರಾತ್ರಿ ನೆಲ್ಯಾಡಿ ಬಳಿ ನಡೆದಿದೆ.

kadaba times
uniq

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ  ಕಡಬ ತಾಲೂಕಿನ ಕೊಣಾಲು ಗ್ರಾಮದ ಕೋಲ್ಪೆ ಭಟ್ಕಳದಿಂದ ಮಂಗಳೂರು ಆಗಿ ಬೆಂಗಳೂರಿಗೆ ಹೋಗುತ್ತಿದ್ದ ಎಸ್‌ಆರ್‌ಎಸ್ ಟ್ರಾವೆಲ್ಸ್ ಕಂಪನಿಯ ಬಸ್ಸುಹಾಗೂ ಬೆಂಗಳೂರಿನಿಂದ ಬಂಗಳೂರು ಕಡೆಗೆ ಬರುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಬಸ್ಸು ಚಾಲಕ ಕೋಲ್ಪೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಬಲ ತಿರುವಿನಲ್ಲಿ ಚಲಾಯಿಸಲು ಸೂಚನೆ ಇದ್ದ ಕಾರಣ ಬಲ ಮಾರ್ಗದಲ್ಲಿ ಡಿವೈಡರ್‌ನ ಎಡಭಾಗದಲ್ಲಿ ಬಸ್ಸು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಎದುರುಗಡೆಯಿಂದ ಲಾರಿ ಮುಖಾಮುಖಿಯಾಗಿ ಬರುತ್ತಿರುವುದನ್ನು ನೋಡಿ ಬಸ್ಸನ್ನು ಬಲ ಬದಿಗೆ ತಿರುಗಿಸಿದಾಗ ಲಾರಿ ಬಸ್ಸಿನ ಎದುರು ಎಡ ಭಾಗಕ್ಕೆ ಡಿಕ್ಕಿಯಾಗಿದೆ.

kadaba times
kadaba times

ಘಟನೆಯಲ್ಲಿ ಬಸ್ಸಿನ ಎಡಬದಿ ಸೀಟಿನಲ್ಲಿ ಕುಳಿತಿದ್ದ ಸಹ ಚಾಲಕ ಹನುಮಂತ ಅವರು ಗಾಯಗೊಂಡಿದ್ದು, ಎರಡು ವಾಹನಗಳೂ ಜಖಂಗೊಂಡಿವೆ. ಘಟನೆ ಬಗ್ಗೆ ಖಾಸಗಿ ಬಸ್ಸಿನ ಚಾಲಕ ಚಿತ್ರದುರ್ಗ ನಿವಾಸಿ ಪವನ್‌ಕುಮಾರ್ ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಕೇಸು ದಾಖಲಾಗಿದೆ.

Related Articles

Latest Articles