32 C
Kadaba
Sunday, March 16, 2025

ಹೊಸ ಸುದ್ದಿಗಳು

ಆಲಂಕಾರು ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರ ಭಾರತಿ ವಿರುದ್ದ ಬಿಜೆಪಿಯ ಮತ್ತೊಂದು ತಂಡವೇ ಸ್ಪರ್ಧೆ

Must read

Kadabatimes
Kadabatimeshttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಡಿಜಿಟಲ್ ಮಾಧ್ಯಮವಾಗಿದೆ.ರಾಜಕೀಯ ಹಸ್ತಕ್ಷೇಪ ಇಲ್ಲದ, ಬಂಡವಾಳ ಶಾಹಿಗಳ ನಿಯಂತ್ರಣದಲ್ಲಿರದ ಸ್ಥಳೀಯ ಆನ್ಲೈನ್ ಮಾಧ್ಯಮ ಇದಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳನ್ನು ಹೆಚ್ಚು ಪ್ರಕಟಿಸುತ್ತಿದೆ. ಸ್ಥಳೀಯ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಪ್ರಮುಖ ವಿಚಾರಗಳನ್ನು ಪ್ರಕಟಿಸುತ್ತದೆ. ನಿಮ್ಮೂರಿನ ಸುದ್ದಿಗಳು, ಜಾಹೀರಾತು ಅಥವಾ ಸಲಹೆಗಳಿದ್ದರೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು

ಕಡಬ ಟೈಮ್, ಆಲಂಕಾರು: ಕಡಬ ತಾಲೂಕಿನ ಪ್ರತಿಷ್ಠಿತ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಮಾ.2  ರಂದು ಚುನಾವಣೆ ನಡೆಯಲಿದ್ದು 12 ಸ್ಥಾನಕ್ಕೆ 24 ಮಂದಿ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಇದ್ದಾರೆ.  44 ಮಂದಿ ನಾಮಪತ್ರ ಸಲ್ಲಿಸಿದ್ದರು. ಎಲ್ಲಾ ನಾಮಪತ್ರಗಳು ಕ್ರಮಬದ್ದವಾಗಿದ್ದು.ಫೆ.24 ರಂದು 20 ಮಂದಿ ನಾಮಪತ್ರ ವಾಪಸ್ಸು ಪಡೆದುಕೊಂಡಿದ್ದರು.ಇದೀಗ  ಈ ಚುನಾವಣೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ.

kadabatimes.in

ಹಿರಿಯ ಆರ್ ಎಸ್ಎಸ್ ಸ್ವಯಂಸೇವಕ, ಬಿಜೆಪಿ ಮುಖಂಡ , ಆಲಂಕಾರು ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ 28 ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ಸಂಘಕ್ಕೆ ಹೊಸ ಕಟ್ಟಡ ಸೇರಿದಂತೆ ಮಾದರಿ ಸಂಘವಾಗಿ ರೂಪಿಸಿದ ಇವರು ತಮ್ಮ ತಂಡದೊಂದಿಗೆ ಸ್ಪರ್ಧೆಗೆ ಇಳಿದಿದ್ದಾರೆ. ಹಿರಿಯ ಬಿಜೆಪಿ ಮುಖಂಡ ದಯಾನಂದ ರೈ ಮನವಳಿಕೆಗುತ್ತು ಕೂಡ ಸಾಥ್ ನೀಡಿದ್ದು, ಬಿಜೆಪಿ ಬೆಂಬಲಿತ ಸಹಕಾರ ಭಾರತಿ ವಿರುದ್ದ ಬಿಜೆಪಿಯ ಮತ್ತೊಂದು ತಂಡವೇ ಸ್ಪರ್ಧಿಸುವುದರಿಂದ ಕಣ ರಂಗೇರಿದಂತು ಸತ್ಯ.

kadabatimes.in

ಈಗಾಗಲೇ ಆಲಂಕಾರು ಸೇವಾ ಸಹಕಾರಿ ಸಂಘದಲ್ಲಿ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಒಬ್ಬ ಅಭ್ಯರ್ಥಿ ನ್ಯಾಯಾಲಯದ ಮೊರೆ ಹೋಗಿದ್ದರು. ಆಲಂಕಾರು ಭಾಗದ ಬಿಜೆಪಿಯೊಳಗೆ ಆಂತರಿಕ ಕಲಹ ಮುಗಿಲುಮುಟ್ಟಿದ್ದು, ಗ್ರಾ.ಪಂ ಸದಸ್ಯರು, ಮಾಜಿ ಅಧ್ಯಕ್ಷರು , ಸೇವಾ ಸಹಕಾರಿ ಸಂಘ ಹಾಗೂ ಹಾಲು ಉತ್ಪಾದಕರ ಸಂಘದ ಸದಸ್ಯರ ನಿಯೋಗವೊಂದು ಸ್ಥಳೀಯ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ನಡೆಯ ವಿರುದ್ಧ ಸಿಡಿದೆದ್ದು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ದೂರು ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ದೂರಿಗೆ ಯಾವೂದೇ ಪ್ರತಿಕ್ರಿಯೆ ಸಿಗದ ಕಾರಣ ಬಿಜೆಪಿ ಎರಡು ತಂಡವಾಗಿ ಈ ಚುನಾವಣೆಯಲ್ಲಿ ಶಕ್ತಿ ಪ್ರದರ್ಶನ ನಡೆಸುತ್ತಿವೆ.

ಸ್ಪರ್ಧೆಯಲ್ಲಿರುವವರ ವಿವರ: ಸಾಮಾನ್ಯ ಸ್ಥಾನಕ್ಕೆ ಅಶೋಕ ಗೋಕುಲನಗರ, ಉದಯ ಸಾಲಿಯಾನ್ ಮಾಯಿಲ್ಲ, ಕೇಶವ ಗೌಡ ಆಲಡ್ಕ, ಜನಾರ್ದನ ಪೂಜಾರಿ ಕದ್ರ, ದಯಾನಂದ ರೈ ಮನವಳಿಕೆ, ಪ್ರಶಾಂತ ಆರ್.ಕೆ ಕಾಜರುಕ್ಕು, ರಘುರಾಮ ಕೆ ನವಕೇವಳ, ರಮೇಶ ಯು ಉಪ್ಪಂಗಳ, ಶೇಖರ ಗೌಡ ಹಿರಿಂಜ, ಸುಭಾನು ರೈ ಮರುವಂತಿಲ, ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ಜಯಕರ ಪೂಜಾರಿ ಕಲ್ಲೇರಿ, ವಿಜಯ ಎಸ್ ಅಂಬಾ, ಹಿಂದುಳಿದ ವರ್ಗ ಬಿ ಮೀಸಲು ಸ್ಥಾನದಿಂದ ದಯಾನಂದ ಎನ್ ಆಲಡ್ಕ, ಪದ್ಮಪ್ಪಗೌಡ ಕೆದುಂಬಾಡಿ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಕುಂಞ ಮುಗೇರ, ಮಾಧವ ಶಾಂತಿಗುರಿ, ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಅಶೋಕ ಪೆರಾಬೆ, ನಿರಂಜನ ಎನ್ ಏಣಿತ್ತಡ್ಕ, ಮಹಿಳಾ ಮೀಸಲು ಸ್ಥಾನದಿಂದ ಗಾಯತ್ರಿ ಚಾಮೆತ್ತಡ್ಕ, ಮೇನ್ಸಿ ಸಜನ್ ಆಗತ್ತಾಡಿ,ರತ್ನಾ ಬಿ.ಕೆ ಕೊಂಡಾಡಿಕೊಪ್ಪ, ಸುಂದರಿ ಬರೆಂಬಾಡಿ, ಸಾಲಗಾರರಲ್ಲದ ಕ್ಷೇತ್ರದಲ್ಲಿ ಲೋಕೇಶ ಕಮ್ಮಿತ್ತಿಲು,ಸುದೀಶ ಪಟ್ಟೆ ಯವರು ಅಂತಿಮ ಕಣದಲ್ಲಿ ಇದ್ದಾರೆ.

ನಾಮಪತ್ರ ವಾಪಸ್ಸು ಪಡೆದವರು :ಸಾಮಾನ್ಯ ಸ್ಥಾನದಿಂದ ಸುಬ್ರಹ್ಮಣ್ಯ ಭಟ್ ಬರೆಂಪಾಡಿ, ಮೈಕಲ್ ಒ.ಜೆ,ಪ್ರಕಾಶ್ ಕೆ.ಆರ್.ಮುರಳೀಧರ .ಬಿ, ನೀರಜ್ ಕುಮಾರ್ ಎ,ವಿಜಯಕುಮಾರ್ ಕೆದಿಲ ರಾಧಾಕೃಷ್ಣ ರೈ ಪರಾರಿ, ತೋಮಸ್ ವಿ.ಎಮ್, ಹಮೀದ್ ಪಿ.ಎ ಗುರುರಾಜ್.ಕೇವಳ, ಮಹೇಶ.ಪಿ, ರಮೇಶ ಎನ್.ಸಿ ತಾವೂರು, ಜನಾರ್ದನ ಗೌಡ ಕಯ್ಯಪೆ, ಹರೀಶಗೌಡ ಎಂತಡ್ಕ, ಮಹಿಳಾ ಮೀಸಲು ಸ್ಥಾನದಿಂದ ಪ್ರೇಮ ಇಡಾಲ, ಹಿಂದುಳಿದ ವರ್ಗ ಬಿ.ಯಿಂದ ಪದ್ಮನಾಭ ಗೌಡ ಆಲಡ್ಕ, ಹಿಂದುಳಿದ ವರ್ಗ ಎ ಸ್ಥಾನದಿಂದ ಅಬೂಬಕ್ಕರ್ ನೆಕ್ಕರೆ, ಹಿಂದುಳಿದ ವರ್ಗ ಬಿ ಸ್ಥಾನದಿಂದ ಗುರುಪ್ರಸಾದ್.ಕೆ, ಆಲೆಕ್ಕಿ,ಸಾಲಗಾರರಲ್ಲದ ಕ್ಷೇತ್ರ ಶೀನ ಮೂಳೆತಮಜಲು, ಮಹಿಳಾ ಮೀಸಲು ಸ್ಥಾನದಿಂದ ನೂಜಿ ಸೇಲಿಕಾತ್, ರವರು ನಾಮಪತ್ರ ವಾಪಸ್ಸು ಪಡೆದಿದ್ದಾರೆ. ಮಾ.2 ರಂದು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ ವರ್ಷದ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಅಧಿಕಾರಿ ಶಿವಲಿಂಗಯ್ಯ ರವರು ತಿಳಿಸಿದ್ದಾರೆ.

kadabatimes.in

ರಮೇಶ್ ಭಟ್ ಉಪ್ಪಂಗಳ ಮತ್ತೆ ಸ್ಪರ್ಧೆ : ರಮೇಶ್ ಭಟ್ ಉಪ್ಪಂಗಳ 1990 ರಲ್ಲಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯತ್ವ ಪಡಕೊಂಡಿದ್ದು, ಸಂಘವು ತೀವ್ರ ಆರ್ಥಿಕ ಮುಗ್ಗಟ್ಟು ಹಾಗೂ ನಷ್ಟ ಅನುಭವಿಸುತ್ತಿದ್ದ ಸಂದರ್ಭದಲ್ಲಿ ಅಂದರೆ 1991 ರಿಂದ ಸಂಘದ ಅಧ್ಯಕ್ಷರಾಗಿ ಸಹಕಾರ ಕ್ಷೇತ್ರದಲ್ಲಿ ಅನುಭವ ಇರುವ ಹಿರಿಯ ಸಹಕಾರಿಗಳೊಂದಿಗೆ ಆಡಳಿತ ನಡೆಸಿ ಸಂಘದ ಉನ್ನತಿಗಾಗಿ 28 ವರ್ಷ ಸೇವೆ ಸಲ್ಲಿಸಿದ್ದಾರೆ.

1991 ರಲ್ಲಿ 121.00 ಲಕ್ಷ ರೂ.ಗಳ ವಾರ್ಷಿಕ ವಹಿವಾಟು ಹೊಂದಿದ್ದ ಈ ಸಂಘವು 2019 ನೇ ಇಸವಿಯಲ್ಲಿ 43,832.00 ಲಕ್ಷ ರೂ. ಗಳ ವಾರ್ಷಿಕ ವಹಿವಾಟು ನಡೆಸುವಂತೆ ಆಡಳಿತ ನಡೆಸಲಾಗಿದೆ. ಅಲ್ಲದೆ 2019ನೇ ಇಸವಿಯಲ್ಲಿ ಸಂಘದ ಸ್ಥಿರಾಸ್ತಿ ಮೌಲ್ಯವು ರೂ. 9.15 ಕೋಟಿಗಳಾಗಿತ್ತು. ಇವರು ಆಡಳಿತ ಚುಕ್ಕಾಣಿ ಹಿಡಿದ ಸಂದರ್ಭದಲ್ಲಿ ನಷ್ಟದಲ್ಲಿದ್ದ ಸಂಸ್ಥೆಯನ್ನು ಲಾಭದ ಪಥಕ್ಕೆ ತಂದು 2018-19 ನೇ ಆರ್ಥಿಕ ವರ್ಷದಲ್ಲಿ 1.12 ಕೋಟಿ ರೂಗಳ ನಿವ್ವಳ ಲಾಭವನ್ನು ಹೊಂದುವಂತೆ ಮಾಡಲು ಸದಸ್ಯ ಸಹಕಾರಿಗಳ, ದಕ್ಷ ಸಿಬ್ಬಂದಿ ವರ್ಗದ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗು ಇನ್ನಿತರ ಸಂಘ ಸಂಸ್ಥೆ ಮತ್ತು ಸ್ಥಳೀಯ ಆಡಳಿತ ವರ್ಗದ ಸಹಕಾರ ಮರೆಯಲು ಅಸಾಧ್ಯ ತಮ್ಮೆಲ್ಲರ ಸಹಕಾರದಿಂದ ನಮ್ಮ ಆಡಳಿತ ಅವಧಿಯಲ್ಲಿ 1994-95 ರಿಂದ ಸತತ 7 ವರ್ಷ ಶೇಕಡಾ 100 ರ ಸಾಲ ವಸೂಲಾತಿಗಾಗಿ ದ.ಕ.ಜಿಲ್ಲಾ ಕೇಂದ್ರ ಬ್ಯಾಂಕಿನ ಪ್ರಶಸ್ತಿ, ಸತತ 3 ವರ್ಷ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ನೀಡಿದ ಉತ್ತಮ ಸಹಕಾರ ಸಂಘ ಪ್ರಶಸ್ತಿ ಹೀಗೆ ಸಂಘಕ್ಕೆ ಹಲವಾರು ಪ್ರಶಸ್ತಿಗಳು ಬಂದಿದ್ದು, ರಾಜ್ಯದಲ್ಲೇ ಮಾದರಿ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅಲ್ಲದೆ ಸಂಘವು ಸತತವಾಗಿ 2004-05 ನೇ ಸಾಲಿನಿಂದ ಆಡಿಟ್ ಎ ವರ್ಗೀಕರಣವಾಗಿತ್ತು.

ಉಪ್ಪಂಗಳ ಆಡಳಿತಾವಧಿಯಲ್ಲಿ ಸಂಘದ ಪ್ರಧಾನ ಕಛೇರಿ ಆಲಂಕಾರು ನಲ್ಲಿ ಸುಸಜ್ಜಿತವಾದ ಬ್ಯಾಂಕಿಂಗ್ ಕಟ್ಟಡ, ಗೋದಾಮು ಕಟ್ಟಡ ನಿರ್ಮಿಸಿದ್ದು, ಕ್ಯಾಂಪ್ಕೋ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಆಸುಪಾಸಿನ ರೈತರ ಹಿತದೃಷ್ಟಿಯಿಂದ ಸ್ಥಳೀಯವಾಗಿ ಕೃಷಿ ಉತ್ಪನ್ನಕ್ಕೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ವಾರ ಪೂರ್ತಿ ಅಡಿಕೆ, ರಬ್ಬರ್, ಕಾಳುಮೆಣಸು ಖರೀದಿ ಕೇಂದ್ರವನ್ನು ತೆರೆಯಲಾಗಿದೆ. ಅಲ್ಲದೆ ರೈತ ಸದಸ್ಯರ ಕೃಷಿ ಉತ್ಪನ್ನಗಳನ್ನು ದಾಸ್ತಾನು ಇಡಲು ಪ್ರಧಾನ ಕಛೇರಿಯಲ್ಲಿರುವ ಗೋದಾಮು ಕಟ್ಟಡದ ಒಂದನೇ ಮಹಡಿಯಲ್ಲಿ ವ್ಯವಸ್ಥೆ ಮಾಡಲಾಗಿದ್ದು ದಾಸ್ತಾನು ಸಾಗಾಟಕ್ಕಾಗಿ ಗೂಡ್ ಲಿಫ್ಟ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಆಸು ಪಾಸಿನ ಎಲ್ಲಾ ಸಮುದಾಯದ ಜನರ ಶುಭ ಸಮಾರಂಭದ ಉಪಯೋಗಕ್ಕಾಗಿ ಪ್ರಧಾನ ಕಛೇರಿಯಲ್ಲಿ ಸುಸಜ್ಜಿತವಾಗಿ ದೀನ ದಯಾಳು ರೈತ ಸಭಾ ಭವನ ನಿರ್ಮಿಸಲಾಗಿದ್ದು ಸದರಿ ಸಭಾ ಭವನದ ನಿರ್ಮಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರದ ಸಂಸತ್ ಸದಸ್ಯರ/ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಸೇರಿದಂತೆ ಸುಮಾರು 83 ಲಕ್ಷದಷ್ಟು ಹರಿದು ಬಂತು. ರೈತಾಪಿ ವರ್ಗದ ಅನುಕೂಲಕ್ಕೆ ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ ಯೋಜನೆಯ ಅಡಿಯಲ್ಲಿ ಮಣ್ಣು ಪರೀಕ್ಷಾ ಕೇಂದ್ರ ತೆರೆಯಲಾಗಿದ್ದು ಪ್ರಸ್ತುತ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಅಲ್ಲದೆ ಕೊಯಿಲ ಹಾಗು ಕುಂತೂರು ಶಾಖೆಗೆ ಸ್ವಂತ ಸುಸಜ್ಜಿತ ಬ್ಯಾಂಕಿಂಗ್ ವಿಭಾಗ ಹಾಗು ಗೋದಾಮು ಕಟ್ಟಡ ನಿರ್ಮಿಸಲಾಗಿದೆ.

ಸಂಘದ ಎಲ್ಲಾ ವ್ಯವಹಾರಗಳನ್ನು ಸಂಪೂರ್ಣ ಗಣಕೀಕರಣಗೊಳಿಸಿ, ರಾಜ್ಯದಲ್ಲೇ ಪ್ರಥಮ ಎನ್ನುವಂತೆ ಸಂಘದ ಹೆಸರಿನಲ್ಲಿ ವೆಬ್ಸೈಟ್ ತೆರೆಯಲಾಗಿದ್ದು, ರೈತ ಸದಸ್ಯರಿಗೆ ಎಸ್.ಎಮ್.ಎಸ್. ಸೇವೆ ಹಾಗು ನೆಫ್ಟ್ / ಆರ್.ಟಿ.ಜಿ.ಎಸ್ ಸೌಲಭ್ಯ ಕಲ್ಪಿಸಲಾಗಿದೆ. ನಮ್ಮ ಆಡಳಿತ ಅವಧಿಯಲ್ಲಿ ರಾಜ್ಯಕ್ಕೇ ಪ್ರಥಮ ಎನ್ನುವಂತೆ ಹೆಚ್ಚಿನ ಎಲ್ಲಾ ರೈತರನ್ನು ಬೆಳೆ ವಿಮೆಗೆ ನೊಂದಾಯಿಸಿ ಹೆಚ್ಚಿನ ಕ್ಷೇಂ ಮೊಬಲಗು ರೈತರಿಗೆ ಸಿಗುವಂತೆ ಮಾಡಿದ ಕೀರ್ತಿ ರಮೇಶ್ ಭಟ್ ಉಪ್ಪಂಗಳ ಅವರಿಗೆ ಸಲ್ಲುತ್ತದೆ.

kadabatimes.in

ರಮೇಶ್ ಭಟ್ ಉಪ್ಪಂಗಳ ಅವರ ಸಹಕಾರಿ ಬಳಗ: ಸಾಮಾನ್ಯ ಕ್ಷೇತ್ರದಿಂದ ರಮೇಶ್ ಭಟ್ ಉಪ್ಪಂಗಳ, ಉದಯ ಎಸ್ ಸಾಲಿಯಾನ್, ಕೇಶವ ಗೌಡ ಎ, ದಯಾನಂದ ರೈ ಮನವಳಿಕೆಗುತ್ತು, ಶೇಖರ ಗೌಡ, ಮಹಿಳಾ ಮೀಸಲು ಕ್ಷೇತ್ರದಿಂದ ರತ್ನಾ ಬಿ.ಕೆ, ಪ್ರವರ್ಗ ಎ : ವಿಜಯ ಎಸ್, ಪ್ರವರ್ಗ ಬಿ: ಪದ್ಮಪ್ಪ ಗೌಡ ಕೆ, ಪರಿಶಿಷ್ಟ ಜಾತಿ: ಕುಂಞ ಮುಗೇರ, ಪರಿಶಿಷ್ಟ ಪಂಗಡ : ಅಶೋಕ, ಸಾಲಗಾರರಲ್ಲದ ಕ್ಷೇತ್ರ: ಲೋಕೇಶ ಸ್ಪರ್ಧಾ ಕಣದಲ್ಲಿದ್ದಾರೆ.