ಕಡಬದಲ್ಲಿ ಪತ್ರಕರ್ತರಿಗೆ ಅಪಘಾತ ವಿಮೆ ನೊಂದಣಿ ಹಾಗೂ ಆರೋಗ್ಯ ಕಾರ್ಡ್ ವಿತರಣೆ

kadaba times

ಕಡಬ:  ಪತ್ರಕರ್ತರ ಸಂಘದ ಸದಸ್ಯರಿಗೆ ರೂ.10 ಲಕ್ಷಗಳ ಅಪಘಾತ ವಿಮಾ ಯೋಜನೆ ನೋಂದಣಿ ಹಾಗೂ ಮಣಿಪಾಲ ಆರೋಗ್ಯ ಕಾರ್ಡ್ ವಿತರಣೆ ಕಾರ್ಯಕ್ರಮ ಕಡಬ ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ನಡೆಯಿತು.

kadaba times
uniq

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್, ಪತ್ರಿಕಾ ಭವನ ಟ್ರಸ್ಟ್ ಹಾಗೂ ಭಾರತೀಯ ಅಂಚೆ ಇಲಾಖೆಯ ಸಹಭಾಗಿತ್ವದಲ್ಲಿ  ಯೋಜನೆ ಹಮ್ಮಿಕೊಳ್ಳಲಾಗಿದೆ.

ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ  ಅರೋಗ್ಯ ಕಾರ್ಡು ವಿತರಿಸಿ ಮಾತನಾಡಿ, ಸಂಘದ ವತಿಯಿಂದ ಸದಸ್ಯರ ಭದ್ರತೆ ಮತ್ತು ಆರೋಗ್ಯದ ದೃಷ್ಟಿಯಿಂದ ಈ ಮಹತ್ವದ ಯೋಜನೆ ಕೈಗೊಳ್ಳಲಾಗಿದೆ. ಕಳೆದ ಎರಡು  ಅವಧಿಯಲ್ಲಿದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.  ಪತ್ರಕರ್ತರ ಕ್ಷೇಮಕ್ಕಾಗಿ ಹತ್ತಾರು ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

kadaba times
kadaba times

ಜಿಲ್ಲಾ‌ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ ಎನ್,  ತಾಲೂಕು ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಕೆ ಎಸ್ ಬಾಲಕೃಷ್ಣ ಕೊಯಿಲ,  ಕಾರ್ಯದರ್ಶಿ ವಿಜಯ ಕಡಬ, ಕೆ.ಎಂ.ಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಕಾರ್ತಿಕ್,  ಸದಸ್ಯರಾದ ತಸ್ಲಿಂ ಮರ್ದಾಳ, ಪ್ರಕಾಶ್ ಕೊಡಿಂಬಾಳ, ಸುಧಾಕರ ಕಾಣಿಯೂರು ,ದಿವಾಕರ ಮಂಡಾಲ,  ಪ್ರವೀಣ್‌ ಚೆನ್ನಾವರ ಹಾಜರಿದ್ದರು.

Related Articles

Latest Articles