
ಕಡಬ ಟೈಮ್ಸ್ ಆಲಂಕಾರು: ಅಂಗನವಾಡಿ ಕೇಂದ್ರದಲ್ಲಿದ್ದ ಬೆಲೆ ಬಾಳುವ ಟಿವಿ ಹಾಗೂ ಇತರ ವಸ್ತುಗಳನ್ನು ಕಳ್ಳರು ಕದ್ದೊಯ್ದ ಘಟನೆ ಅ.7 ರಂದು ಬೆಳಕಿಗೆ ಬಂದಿದೆ.


ಅಂಗನವಾಡಿಗೆ ಶಿಶು ಅಬಿವೃದ್ದಿ ಇಲಾಖಾ ಮುಖಾಂತರ ದಿನಾಂಕ ಎ.4 ರಂದು ಸುಮಾರು 45,000 ರೂ ಮೌಲ್ಯದ ( Samsung Ultra HD/4K. TV 108 Cm ಟಿ.ವಿ) ಯನ್ನು ಒದಗಿಸಲಾಗಿತ್ತು. ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಅ.6 ರಂದು ರಂದು ಸಂಜೆ ಅಂಗನವಾಡಿ ಕೇಂದ್ರವನ್ನು ಬಂದ್ ಮಾಡಿ ಮನೆಗೆ ತೆರಳಿದ್ದರು.
ಮರುದಿನ ಅ.7 ರಂದು ಬೆಳಿಗ್ಗೆ ಅಂಗನವಾಡಿ ಸಹಾಯಕಿ ಬಂದು ಬಾಗಿಲು ತೆರೆದಾಗ ಅಂಗನವಾಡಿ ಕೇಂದ್ರದ ಹಿಂಬದಿಯ ಬಾಗಿಲನ್ನು ಒಡೆದು ಅಂಗನಾಡಿ ಕೇಂದ್ರದಲ್ಲಿದ್ದ ಟಿ.ವಿ ಮತ್ತು ಟಿ.ವಿ ರಿಮೋಟ್ ಮತ್ತು Mitsun ಸ್ಟೆಬಿಲೈಸರ್ ನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿದೆ.


ಯಾರೋ ಕಳ್ಳರು ಅಂಗನವಾಡಿ ಕೇಂದ್ರದ ಹಿಂಬದಿಯ ಬಾಗಿಲನ್ನು ಒಡೆದು ಅಂಗನವಾಡಿ ಕೇಂದ್ರದಲ್ಲಿದ್ದ ಟಿ.ವಿ ಮತ್ತು ಟಿ.ವಿ ರಿಮೋಟ್ ,ಅಂದಾಜು ಮೌಲ್ಯ 45000/- ಮತ್ತು Mitsun ಸ್ಟೆಬಿಲೈಸರ್ ಅಂದಾಜು ಮೌಲ್ಯ 2000/- ರೂ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ.ಕಳವು ಮಾಡಿರುವ ಸೊತ್ತುಗಳ ಅಂದಾಜು ಮೌಲ್ಯರೂ 47,000/. ಆಗಬಹುದು . ಆದುದರಿಂದ ಕಳವು ಆಗಿರುವ ಸೊತ್ತು ಮತ್ತು ಆರೋಪಿತನನ್ನು ಪತ್ತೆ ಮಾಡಿಕೊಡಬೇಕಾಗಿ ಕಡಬ ಪೋಲಿಸರಿಗೆ ಅಂಗನ ಶಿಕ್ಷಕಿ ಸವಿತಾ ರವರು ದೂರು ಸಲ್ಲಿಸಿದ್ದಾರೆ.
ಈ ಬಗ್ಗೆ ಕಡಬ ಅರಕ್ಷಕ ಠಾಣೆಯ ಠಾಣಾಧಿಕಾರಿ ಅಭಿನಂದನ್ ಮತ್ತು ಪೋಲಿಸರು ಹಾಗು ಮಂಗಳೂರಿನ ಬೆರಳಚ್ಚು ತಜ್ಞರು,ಶ್ವಾನದಳದವರು ಸ್ಥಳಕ್ಕೆ ಭೇಟಿ ತನಿಖೆ ನಡೆಸಿದ್ದಾರೆ.
