ಕಡಬ ಟೈಮ್, ಕುಕ್ಕೆ ಸುಬ್ರಹ್ಮಣ್ಯ :ಪ್ರವಾಸಿ ಮಹಿಳೆಯೊಬ್ಬರು ಸ್ನಾನ ಮಾಡುತ್ತಿರುವ ವೇಳೆ ವೀಡಿಯೋ ಚಿತ್ರಿಕರಿಸಿದ ಆರೋಪದ ಮೇರೆಗೆ ವಸತಿಗೃಹದ ಯುವಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.


ಆಂದ್ರ ಮೂಲದ ಮಹಿಳೆಯೊಬ್ಬರು ಕುಟುಂಬಸ್ಥರೊಂದಿಗೆ ಕುಕ್ಕೆಗೆ ಆಗಮಿಸಿ ಪೂಜೆಗಾಗಿ ದೇಗುಲದ ಅಧೀನದ ವಸತಿಗೃಹದಲ್ಲಿ ಉಳಿದು ಕೊಂಡಿದ್ದರು. ಈ ಸಂದರ್ಭದಲ್ಲಿ ದೇಗುಲದ ಹೊರಗುತ್ತಿಗೆ ನೆಲೆಯಲ್ಲಿ ಕರ್ತವ್ಯದಲ್ಲಿದ್ದ ರೂಂ ಬಾಯ್ ಮಹಿಳೆ ಸ್ನಾನ ಮಾಡುವ ವೇಳೆ ವೀಡಿಯೋ ಮಾಡಿರುವುದಾಗಿ ಆರೋಪಿಸಲಾಗಿದೆ.




ಈ ಬೆಳವಣಿಗೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ನೌಕರರನ್ನು ಪೊಲೀಸರಿಗೆ ಒಪ್ಪಿಸಿದ್ದು ಆತನ ಮೊಬೈಲನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

