Home Blog Page 4

ಕಾರ್ಯಕ್ರಮಕ್ಕೆಂದು ಬಂದು ಸ್ನಾನ ಮಾಡಲು ನದಿಗೆ ಇಳಿದ ಮೂವರು ಯುವಕರು ನೀರುಪಾಲು

0
ಕಾರ್ಯಕ್ರಮಕ್ಕೆಂದು ಬಂದು ಸ್ನಾನ ಮಾಡಲು ನದಿಗೆ ಇಳಿದ  ಮೂವರು ಯುವಕರು ನೀರುಪಾಲು

ಕಡಬ ಟೈಮ್ಸ್ ,ಬೆಳ್ತಂಗಡಿ: ಕಾರ್ಯಕ್ರಮಕ್ಕೆಂದು ಬಂದ ಯುವಕರು ಊಟದ ಬಳಿಕ ನದಿಗೆ ಸ್ನಾನಕ್ಕೆ ಹೋದ ಮೂವರು ಯುವಕರು ನೀರುಪಾಲಾದ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Please wait while you are redirected...or Click Here if you do not want to wait.

ಕಡಬ: ಪ್ರಜಾ ಧ್ವನಿ ಕರ್ನಾಟಕದ ವತಿಯಿಂದ ರಾಷ್ಟ್ರಧ್ವಜ ಗೌರವ ಯಾತ್ರೆಗೆ ಚಾಲನೆ

0
ಕಡಬ: ಪ್ರಜಾ ಧ್ವನಿ ಕರ್ನಾಟಕದ ವತಿಯಿಂದ  ರಾಷ್ಟ್ರಧ್ವಜ ಗೌರವ ಯಾತ್ರೆಗೆ ಚಾಲನೆ

ಕಡಬ:  ಪ್ರಜಾ ಧ್ವನಿ ಕರ್ನಾಟಕದ ವತಿಯಿಂದ 1949 ನವೆಂಬರ್ 26 ಸಂವಿಧಾನದ ಸಮರ್ಪಣಾ ದಿನ ನೆನಪಿನ ಪ್ರಯುಕ್ತ ನವಂಬರ್ 27 ಬುಧವಾರದಂದು ರಾಷ್ಟ್ರಧ್ವಜ ಗೌರವ ಯಾತ್ರೆಗೆ  ಕಡಬದ ತಾಲೂಕು ಆಡಳಿತ ಸೌಧದ ಬಳಿ ಚಾಲನೆ ನೀಡಲಾಯಿತು.

Please wait while you are redirected...or Click Here if you do not want to wait.

ವೃದ್ದಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಲು ಬಂದಿದ್ದ ಹಿರಿಯ ವ್ಯಕ್ತಿ ಕುಸಿದು ಬಿದ್ದು ಸಾವು

0
ವೃದ್ದಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಲು ಬಂದಿದ್ದ ಹಿರಿಯ ವ್ಯಕ್ತಿ ಕುಸಿದು ಬಿದ್ದು ಸಾವು

ಕಡಬ ಟೈಮ್ , ಸುಳ್ಯ: ವೃದ್ದಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಲೆಂದು ಬಂದಿದ್ದ ಹಿರಿಯ ವ್ಯಕ್ತಿಯೊಬ್ಬರು ತಾಲೂಕು ಕಚೇರಿಯ ಪಡಶಾಲೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಸುಳ್ಯದಿಂದ ವರದಿಯಾಗಿದೆ.

Please wait while you are redirected...or Click Here if you do not want to wait.

PAN 2.0 Project: ಪ್ಯಾನ್‌ 2.0ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ:ಹೊಸ ಪ್ಯಾನ್‌ ಕಾರ್ಡ್‌ ಗೆ ಅರ್ಜಿ ಹಾಕಬೇಕೆ?

0
PAN 2.0 Project: ಪ್ಯಾನ್‌ 2.0ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ:ಹೊಸ ಪ್ಯಾನ್‌ ಕಾರ್ಡ್‌ ಗೆ ಅರ್ಜಿ ಹಾಕಬೇಕೆ?

ಕಡಬ ಟೈಮ್, ಮುಖ್ಯ ಸುದ್ದಿ:  ಸದ್ಯ ಚಾಲ್ತಿಯಲ್ಲಿರುವ ಪ್ಯಾನ್‌ ಕಾರ್ಡ್‌ (PAN Card) ನ ನವೀಕರಣ ಮಾಡುವ ಪ್ಯಾನ್‌ 2.0 (PAN 2.0) ಯೋಜನೆಗೆ ಕೇಂದ್ರ ಸಂಪುಟ ಅನುಮೋದಿಸಿದೆ. ತೆರಿಗೆದಾರರ ಸೇವೆಗಳನ್ನು ಸುಧಾರಿಸಲು ಮತ್ತು ವ್ಯಾಪಾರ ಕಾರ್ಯಾಚರಣೆಗಳನ್ನು ಸುವ್ಯವಸ್ಥಿತಗೊಳಿಸುವ ಗುರಿಯನ್ನು ಇದು ಹೊಂದಿದೆ.

Please wait while you are redirected...or Click Here if you do not want to wait.

ಕಾಂಗ್ರೆಸ್ ಮುಖಂಡನನ್ನೇ ನಾಲ್ಕು ಬಾರಿ ಅಳೆದಾಡಿಸಿದ ಕಡಬದ ಸರ್ವೇಯರ್ : ಯಾವ ಅರ್ಜಿ ಕೊಟ್ಟಿದ್ದರು?

0
ಕಾಂಗ್ರೆಸ್ ಮುಖಂಡನನ್ನೇ ನಾಲ್ಕು ಬಾರಿ ಅಳೆದಾಡಿಸಿದ ಕಡಬದ ಸರ್ವೇಯರ್ : ಯಾವ ಅರ್ಜಿ ಕೊಟ್ಟಿದ್ದರು?

ಕಡಬ: ನಾನು ಕೊಟ್ಟ ಅರ್ಜಿಗೆ   ಕಡಬದ ಸರ್ವೆಯರು ನಾಲ್ಕು ತಿಂಗಳು ಕುಣಿಸಿದ್ದಾರೆ ಎಂದು ಕೆಪಿಸಿಸಿ  ಮಾಜಿ ಕಾರ್ಯದರ್ಶಿ ಯಂ. ವೆಂಕಪ್ಪ ಗೌಡ ತನಗಾದ ಅನುಭವ ಹಂಚಿಕೊಂಡಿದ್ದಾರೆ.ಇತ್ತೀಚೆಗೆ ಗುಂಡ್ಯದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ .

Please wait while you are redirected...or Click Here if you do not want to wait.

ಕಡಬ: ಅಧಿಕ ಮತ ಪಡೆದು ಜಯಗಳಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ

0
ಕಡಬ: ಅಧಿಕ ಮತ ಪಡೆದು ಜಯಗಳಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ

ಕಡಬ:  ಕುಟ್ರುಪಾಡಿ ಗ್ರಾಮ ಪಂಚಾಯತ್ ನ   3ನೇ ವಾರ್ಡಿನಲ್ಲಿ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ನೇರ ಸ್ಪರ್ಧೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಯಗಳಿಸಿದ್ದಾರೆ.

Please wait while you are redirected...or Click Here if you do not want to wait.

ಶಿರಾಡಿ ಪೇಟೆಗೆ ಪಡಿತರ ಪಡೆಯಲು ಬಂದ ವ್ಯಕ್ತಿಗೆ ಬಸ್ ಢಿಕ್ಕಿ: ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತ್ಯು

0
ಶಿರಾಡಿ ಪೇಟೆಗೆ ಪಡಿತರ ಪಡೆಯಲು ಬಂದ ವ್ಯಕ್ತಿಗೆ ಬಸ್ ಢಿಕ್ಕಿ: ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತ್ಯು

ನೆಲ್ಯಾಡಿ:  ಶಿರಾಡಿಯಲ್ಲಿ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಪಾದಚಾರಿಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

Please wait while you are redirected...or Click Here if you do not want to wait.

ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನ ಸಹಾಯ ಕಡಿತ : ಕಾರ್ಮಿಕರಿಂದ ಕಡಬದಲ್ಲಿ ಪ್ರತಿಭಟನೆ

0
ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನ ಸಹಾಯ ಕಡಿತ : ಕಾರ್ಮಿಕರಿಂದ  ಕಡಬದಲ್ಲಿ ಪ್ರತಿಭಟನೆ

ಕಡಬ ಟೈಮ್ : ಶ್ರಮಿಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಸರಕಾರ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನ ಸಹಾಯ ಕಡಿತಗೊಳಿಸಿರುವುದನ್ನು ಖಂಡಿಸಿ  ಸೋಮವಾರ ಕಡಬ ತಹಸೀಲ್ದಾರ್ ಕಛೇರಿ ಎದುರು  ನೂರಾರು ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಕಡಬ ಪಂಜ ರಸ್ತೆಯಲ್ಲಿರುವ ಕಾರ್ಮಿಕ ನಿರೀಕ್ಷಕರ ಕಛೇರಿ ಎದುರಿನಿಂದ ಮೆರವಣಿಗೆಯಲ್ಲಿ ಸಾಗಿ ತಹಸೀಲ್ದಾರ್ ಕಛೇರಿ ಎದುರು ಪ್ರತಿಭಟನಾ ಸಭೆ ನಡೆಸಿ ಬಳಿಕ ತಹಸೀಲ್ದಾರ್ ಪ್ರಭಾಕರ ಖಜೂರೆ  ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರಮಿಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಮೋಹನ್ ಕೆ.ಪಿ. ರಾಜ್ಯ ಸರಕಾರ ಕಾರ್ಮಿಕರಿಗೆ ನೀಡುವ ಸವಲತ್ತುಗಳನ್ನು ಕಸಿದುಕೊಂಡು ಶೋಷಣೆ ಮಾಡುತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

Please wait while you are redirected...or Click Here if you do not want to wait.

ಕರ್ನಾಟಕ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಿAದ ೨೦೨೧-೨೨ ರವರೆಗೆ ಕಾರ್ಮಿಕರಿಗೆ ಉತ್ತಮ ಸೌಲಭ್ಯ ದೊರೆಯುತ್ತಿತ್ತು. ಆದರೆ ೨೦೨೨-೨೩ ರಲ್ಲಿ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನ ಸಹಾಯ ಕೆಲವರಿಗೆ ಮಾತ್ರ ವಿತರಿಸಲಾಯಿತು. ೨೦೨೨-೨೩ ರಿಂದ ಧನ ಸಹಾಯದಲ್ಲಿ ಭಾರಿ ಕಡಿತ ಮಾಡಲಾಯಿತು. ಅಂದರೆ ಒಂದನೇ ತರಗತಿ ಮಕ್ಕಳಿಗೆ ನೀಡುತ್ತಿದ್ದ ರೂ. ೫೦೦೦/- ವನ್ನು ರೂ.೧೮೦೦/- ಕ್ಕೂ. ಅತ್ಯುನ್ನತ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳಿಗೆ ನೀಡುತ್ತಿದ್ದ ರೂ.೭೫,೦೦೦.೦೦/- ವನ್ನು ಕೇವಲ ರೂ ೧೧೦೦೦/- ಕ್ಕೂ ಕಡಿತಗೊಳಿಸಲಾಯಿತು. ಮಾತ್ರವಲ್ಲದೆ ಶೈಕ್ಷಣಿಕ ಧನ ಸಹಾಯಕ್ಕೆ ಅರ್ಜಿ ಸಲ್ಲಿಸಲು ೨೦೨೩-೨೪ ಮತ್ತು ೨೦೨೪-೨೫ ರಲ್ಲಿ ಇನ್ನೂ ಕೂಡಾ ಎಸ್ ಎಸ್ ಪೋರ್ಟಲ್ ವ್ಯವಸ್ಥೆ ಸರಿಯಾಗದೆ ಲಕ್ಷಾಂತರ ವಿಧ್ಯಾರ್ಥಿಗಳಿಗೆ ಅನ್ಯಾಯವಾಗಿದೆ.

ಆಸ್ಪತ್ರೆ ಬಿಲ್ಲುಗಳಲ್ಲಿ ಕೇವಲ ಶೇಕಡ ೧೦% ರಷ್ಟು ಮಾತ್ರ ಪಾವತಿಗೆ ಮಂಜೂರಾತಿ ನೀಡುತ್ತಿದ್ದಾರೆ. ಕಲ್ಯಾಣ ಮಂಡಳಿಯಲ್ಲಿ ಅನೇಕ ವಿವಿಧ ಸೌಲಭ್ಯಗಳನ್ನು ಘೋಷಿಸಿಕೊಂಡಿದ್ದರೂ ಕೆಲವೇ ಕೆಲವು ಸೌಲಭ್ಯಗಳನ್ನು ಮಾತ್ರ ನೀಡುತ್ತಿದ್ದಾರೆ. ಸಮಸ್ಯೆ ಪರಿಹರಿಸಬೇಕಿದ್ದ  ಕಾಮಿಕ ಸಚಿವ ಸಂತೋಷ್ ಲಾಡ್ ಸುಮ್ಮನಿದ್ದಾರೆ. ಸಮಸ್ಯೆಗಳನ್ನು  ಹದಿನೈದು ದಿನಗಳ ಒಳಗೆ ಪರಿಹರಿಸಿ ಕಟ್ಟಡ ಕಾರ್ಮಿಕರಿಗೆ ನ್ಯಾಯ ಒದಗಿಸಿ ಕೊಡಬೇಕು, ತಪ್ಪಿದಲ್ಲಿ ಬೆಂಗಳೂರು ಚಲೋ ಮಾಡಿ ವಿಧಾನ ಸೌಧ ಮುತ್ತಿಗೆ ಹಾಕಲಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಶ್ರಮಿಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಶಿವಶಂಕರ್ ಕೆ, ಕಾರ್ಯದರ್ಶಿ ಪುರುಷೋತ್ತಮ ಸಣ್ಣಾರ,  ಖಜಾಂಜಿ ಗಿರಿಯಪ್ಪ ಗೌಡ ಚಿದ್ಗಲ್, ಪ್ರಮುಖರಾದ  ಅಬ್ದುಲ್ ಲತೀಫ್ ಕಳಾರ, ಹಾರಿಶ್ ಕಳಾರ, ಅವಿನ್ ಮರ್ಧಾಳ, ಗುಡ್ಡಪ್ಪ ಗೌಡ ಅಮೈ, ಗಣೇಶ್ ಚಿದ್ಗಲ್, ಸಜಿ ನೆಟ್ಟಣ, ದೇವಪ್ಪ, ಪ್ರಕಾಶ್, ಪ್ರಶಾಂತ್, ಸೀತಾರಾಮ ಕೊಂಬಾರು, ವಿನೋದ್ ಕುಮಾರ್ ಮರ್ಧಾಳ, ಅನಿಲ್ ಕುಮಾರ್ ನೆಟ್ಟಣ ಮತ್ತಿತರರು ಭಾಗವಹಿಸಿದ್ದರು.

ಕಡಬದಲ್ಲಿ ಭೀಮ್ ಆರ್ಮಿ  ಸಂಘಟನೆಯ ಪದಗ್ರಹಣ: ಕರಾವಳಿ ಭಾಗದಲ್ಲಿ ನೀಲಿಪಡೆಗಳ ಹೆಜ್ಜೆ ಗುರುತು – ಜಯಕುಮಾರ್ ಹಾದಿಗೆ

0
ಕಡಬದಲ್ಲಿ ಭೀಮ್ ಆರ್ಮಿ  ಸಂಘಟನೆಯ ಪದಗ್ರಹಣ: ಕರಾವಳಿ ಭಾಗದಲ್ಲಿ ನೀಲಿಪಡೆಗಳ ಹೆಜ್ಜೆ ಗುರುತು – ಜಯಕುಮಾರ್ ಹಾದಿಗೆ

ಕಡಬ:  ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ (ರಿ)ಇದರ ತಾಲೂಕು ಘಟಕದ ಪದಗ್ರಹಣ ಕಾರ್ಯಕ್ರಮವು ಪ.ಪಂ ಸಭಾಂಗಣದಲ್ಲಿ  ನ.24 ರಂದು ನಡೆಯಿತು. ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆಗೈದು ದೀಪ ಬಳೆಗಿಸಿ   ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಡಬ ಠಾಣಾ ತನಿಖಾ ವಿಭಾಗದ ಉಪನಿರೀಕ್ಷಕ ಅಕ್ಷಯ ಡವಗಿ ಅವರು ಸಂಘಟನೆಗಳು ಹೋರಾಟದ ಜೊತೆಗೆ  ಸಮುದಾಯದ ಜನರಿಗೆ ಶಿಕ್ಷಣಕ್ಕೆ ಒತ್ತು  ನೀಡುವ ಮೂಲಕ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಯಾಗಲು ಪೂರಕ ವಾತಾವರಣ ನಿರ್ಮಿಸಬೇಕೆಂದರು .

ಸಂಘಟನೆಯ  ರಾಜ್ಯ ಉಪಾಧ್ಯಕ್ಷ ಜಯಕುಮಾರ್ ಹಾದಿಗೆ ದಿಕ್ಸೂಚಿ ಭಾಷಣ ಮಾಡಿ  ಕರಾವಳಿ ಭಾಗದಲ್ಲಿ ನೀಲಿಪಡೆಗಳ ಹೆಜ್ಜೆ ಗುರುತುಗಳು ಹೆಚ್ಚಾಗುತ್ತಿದೆ, ಸತ್ಯ ನ್ಯಾಯಕ್ಕಾಗಿ ಅನ್ಯಾಯಕ್ಕೆ ಒಳಗಾದವರ ಧ್ವನಿಯಾಗಿ ಸಂವಿಧಾನಿಕ ಹಕ್ಕನ್ನು ಕೇಳಲು ನಾವು ಹಿಂಜರಿಯಬಾರದು ಎಂದರು.

Please wait while you are redirected...or Click Here if you do not want to wait.

ಸಂಘಟನೆಯ  ಸಂಸ್ಥಾಪಕ ರಾಜ್ಯಾಧ್ಯಕ್ಷ ಆಯುಷ್ಮಾನ್ ಮತೀನ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ  ಸಂಘಟನೆಯ ಕಟ್ಟುವುದು ದೊಡ್ಡ ವಿಷಯವಲ್ಲ ನಮ್ಮಲ್ಲಿ ದೂರದೃಷ್ಟಿತ್ವ  ಇರಬೇಕು, ಪರಿಪೂರ್ಣ ಜ್ಞಾನ ಪಡೆದುಕೊಂಡು ಹೋರಾಟಕ್ಕೆ ಮುಂದಾಗಬೇಕು .   ಸಮುದಾಯದ ಮೇಲೆ ದಬ್ಬಾಳಿಕೆ ,ದೌರ್ಜನ್ಯ ನಡೆದಾಗ ದಲಿತರನ್ನೇ ಎತ್ತಿಕಟ್ಟಿ ಧಮನಿಸುವ ಪ್ರಯತ್ನಗಳು ನಡೆಯುತ್ತವೆ ಈ ಬಗ್ಗೆ ತಿಳಿದುಕೊಂಡು   ಖಂಡಿಸುವ ಎದೆಗಾರಿಕೆ ನಮ್ಮಲ್ಲಿರಬೇಕೆಂದರು.

ಹಾಸನ ಜಿಲ್ಲಾಧ್ಯಕ್ಷ ಪ್ರದೀಪ್ ಹೆಚ್.ಎಸ್ ಅಥಿತಿ ನೆಲೆಯಲ್ಲಿ ಮಾತನಾಡಿ  ನಮ್ಮಲ್ಲಿ ಅರಿವಿನ ಕೊರತೆ ಇದೆ, ಸಾಮಾಜಿಕ ಶಿಕ್ಷಣ ಪಡೆದು ಸಂಘಟನೆಯಲ್ಲಿ ಸಕ್ರಿಯಾವಾಗಿ ತೊಡಗಿಕೊಳ್ಳುವ ಮೂಲಕ  ಮುಖ್ಯವಾಹಿನಿಗೆ ಬರಬೇಕು ಎಂದರು.

ದ.ಕ ಜಿಲ್ಲಾಧ್ಯಕ್ಷ ವಿವೇಕಾನಂದ ಶಿರ್ತಾಡಿ, ಹಾಸನ ಜಿಲ್ಲಾ ಉಪಾಧ್ಯಕ್ಷ ನವೀನ್ ಸಾಲಗಾಮೆ,  ಹಾಸನ ತಾಲೂಕು ಅಧ್ಯಕ್ಷ ಹೇಮಂತ್ ಡಿ.ಕೆ,   ಶಿಕ್ಷಕ ಶೇಖರ್ ಅತ್ನಿ,  ಸುಳ್ಯ  ತಾಲೂಕು ಅಧ್ಯಕ್ಷ ವಸಂತ್ ಕುದ್ದಾಜೆ,  ಅಲೂರು ತಾಲೂಕು ಅಧ್ಯಕ್ಷ ಜಗದೀಶ್ ನಿಡನೂರು, ಧರ್ಮ ಪ್ರಚಾರಕ   ದಿನೇಶ್ ಮುಳೂರು, ದಕ್ಷಿಣ ಕರ್ನಾಟಕ ಅಧ್ಯಕ್ಷ ಗಿರೀಶ್ ಕೆ.ಬಿ  ವೇದಿಕೆಯಲ್ಲಿದ್ದರು.

ನೂತನ ಪದಾಧಿಕಾರಿಗಳ ಆಯ್ಕೆ: ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ  ತಾರಾನಾಥ  ಕಡಿರಡ್ಕ  ಉಪಾಧ್ಯಕ್ಷರಾಗಿ  ಸುರೇಶ  ತೋಟಂತಿಲ ,  ಕಾರ್ಯದರ್ಶಿಯಾಗಿ  ಸುಂದರ  ಪುರುಷಬೆಟ್ಟು,  ಸಂಚಾಲಕರಾಗಿ    ದಯಾನಂದ ಕಡಿರಡ್ಕ,   ಸಂಘಟನಾ  ಕಾರ್ಯದರ್ಶಿಯಾಗಿ   ಲೋಕೇಶ್  ಕಡಿರಡ್ಕ, ಕೋಶಾಧಿಕಾರಿಯಾಗಿ   ಯೋಗೀಶ್ ಕಡಿರಡ್ಕ,   ಕಾರ್ಯದರ್ಶಿಯಾಗಿ   ಮೋಹನ್  ಉಜುರ್ಲಿ ಇವರನ್ನು ಆಯ್ಕೆ ಮಾಡಿ ಸಂಸ್ಥಾಪಕ ರಾಜ್ಯಾಧ್ಯಕ್ಷರು ಆದೇಶಪತ್ರ ನೀಡಿದರು.  ರಾಘವ ಕಳಾರಾವರನ್ನು ಜಿಲ್ಲಾ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.  

ಇದೇ ಸಂದರ್ಭದಲ್ಲಿ ಹಿರಿಯ ದಲಿತ ಮುಖಂಡ ತನಿಯಪ್ಪ ಬೆದ್ರೋಳಿ ಅವರನ್ನು ಸನ್ಮಾನಿಸಲಾಯಿತು. ಕಡಬ ಭೀಮ್ ಆರ್ಮಿ ಘಟಕದ ಅದ್ಯಕ್ಷ ರಾಘವ ಕಳಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಲತಾ .ಡಿ  ಮತ್ತು ಸುಪ್ರಿತಾ ಡಿ ಅವರು ಸಂವಿಧಾನ ಪೀಠಿಕೆ ಓದಿದರು.  ವಿ.ಕೆ ಕಡಬ ಸ್ವಾಗತಿಸಿ ಮಹಾಬಲ ಪಟುಬೆಟ್ಟು ಧನ್ಯವಾದ ವಿತ್ತರು.  ಸಂದೀಪ್ ಪಾಂಜೋಡಿ ನಿರೂಪಿಸಿದರು.

ಕಡಬ ಬಳಿ ಸರ್ಕಾರಿ ಬಸ್ – ಮಿನಿ ಗೂಡ್ಸ್ ನಡುವೆ ಅಪಘಾತ

0
ಕಡಬ ಬಳಿ ಸರ್ಕಾರಿ ಬಸ್ – ಮಿನಿ ಗೂಡ್ಸ್ ನಡುವೆ ಅಪಘಾತ

ಕಡಬ: ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕಡಬ ಸಮೀಪದ ದೇರಾಜೆ ಕ್ರಾಸ್ ನಲ್ಲಿ ಬಸ್ ಮತ್ತು ಮಿನಿ ಗೂಡ್ಸ್ ನಡುವೆ ಅಪಘಾತ ಸಂಭವಿಸಿದ್ದು ಚಾಲಕ ಹಾಗೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ನ.25 ರಂದು ಮಧ್ಯಾಹ್ನ ನಡೆದಿದೆ.

Please wait while you are redirected...or Click Here if you do not want to wait.

ಕಡಬದಿಂದ ಶಾಂತಿಮೊಗರು ಮಾರ್ಗದ ಮೂಲಕ ಪುತ್ತೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್ ಮತ್ತು ಬಲ್ಯದಿಂದ ಕಡಬದತ್ತ ಸಂಚರಿಸುತ್ತಿದ್ದ ಮಿನಿ ಗೂಡ್ಸ್ ನಡುವೆ ಅಪಘಾತ ಸಂಭವಿಸಿರುವುದಾಗಿದೆ. ಬಸ್ ನ ಗಾಜು ಹಾನಿಯಾದ್ರೆ ಗೂಡ್ಸ್ ವಾಹನದ ಮುಂಭಾಗ ಜಖಂ ಆಗಿದೆ.

ವೇಗದ ಚಾಲನೆಯೇ ಈ ರಸ್ತೆ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು    ಸಣ್ಣ ಪ್ರಮಾಣದ ಗಾಯಗಳೊಂದಿಗೆ ಚಾಲಕ ಮತ್ತು ಪ್ರಯಾಣಿಕರು ಪಾರಾಗಿದ್ದಾರೆ. ಕಡಬ ಪೊಲೀಸರಿಗೆ ಮಾಹಿತಿ ರವಾನಿಸಲಾಗಿದೆ.