ಕುಕ್ಕೆ ಸುಬ್ರಹ್ಮಣ್ಯ: ಪ್ರಸಿದ್ದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಚಂಪಾಷಷ್ಠಿ ಮಹೋತ್ಸವ ಸಂಭ್ರಮದಲ್ಲಿದೆ. ರಾಮ-ಲಕ್ಷ್ಮಣ ಎನ್ನುವ ಎರಡು ಜೋಡಿ ಕೊಪ್ಪರಿಗೆ ಬರುವ ಮೂಲಕ ಬುಧವಾರ ಚಂಪಾಷಷ್ಠಿ ಮಹೋತ್ಸವ ಆರಂಭಗೊಂಡಿದೆ.ಇಲ್ಲಿನ ಜಾತ್ರೆ ಹಲವಾರು ವಿಶೇಷಗಳನ್ನು ಒಳಗೊಂಡಿದ್ದು ಅದರಲ್ಲಿ ಜಾತ್ರೆ ನೋಡಲು ಬರುವ ವಿಶೇಷ ಅತಿಥಿಗಳಾದ ದೇವರ ಮೀನುಗಳು ಒಂದಾಗಿದೆ.