ಚಾರ್ವಾಕದಲ್ಲಿ ಅಕ್ರಮ ಕೋಳಿ ಅಂಕ ಜೂಜಾಟದ ಅಡ್ಡೆಗೆ ಕಡಬ ಪೊಲೀಸರ ದಾಳಿ

kadaba times

 ಚಾರ್ವಾಕ ಗ್ರಾಮದ ಬೀರೋಳಿಗೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ನಡೆಸಲಾಗುತ್ತಿದ್ದ ಕೋಳಿ ಅಂಕದ ಜೂಜಾಟದ ಅಡ್ಡೆಗೆ ಕಡಬ ಪೊಲೀಸರು ದಾಳಿ ನಡೆಸಿದ್ದಾರೆ. ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದು, 5 ಅಂಕದ ಕೋಳಿಗಳು, ಕೋಳಿ ಕಾಲುಗಳಿಗೆ ಕಟ್ಟುವ ಬಾಳ್ (ಕತ್ತಿ) ಹಾಗೂ ಜೂಜಾಟದ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

kadaba times

​ಕಡಬ: ಕಡಬ ತಾಲೂಕಿನ ಚಾರ್ವಾಕ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಾನೂನುಬಾಹಿರವಾಗಿ ಹಣವನ್ನು ಪಣವಾಗಿಟ್ಟು ನಡೆಸುತ್ತಿದ್ದ ಕೋಳಿ ಅಂಕ ಜೂಜಾಟದ ಅಡ್ಡೆ ಮೇಲೆ ಕಡಬ ಪೊಲೀಸರು  ದಾಳಿ ನಡೆಸಿದ್ದಾರೆ.

​ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಅಂಕದ ಕೋಳಿಗಳು ಹಾಗೂ ಜೂಜಾಟಕ್ಕೆ ಬಳಸುತ್ತಿದ್ದ ಮಾರಕ ಕತ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

​ಖಚಿತ ಮಾಹಿತಿ ಮೇರೆಗೆ ಸಂಜೆ ದಾಳಿ:ಚಾರ್ವಾಕ ಗ್ರಾಮದ ಬೀರೋಳಿಗೆ ಎಂಬಲ್ಲಿ ಸಾರ್ವಜನಿಕ ಸ್ಥಳವೊಂದರಲ್ಲಿ ಗುಂಪು ಸೇರಿಕೊಂಡು ಅಕ್ರಮವಾಗಿ ಹಣ ಕಟ್ಟಿ ಕೋಳಿ ಅಂಕ ಜೂಜಾಟವಾಡುತ್ತಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ಉಪನಿರೀಕ್ಷಕರು (ಕಾನೂನು ಮತ್ತು ಸುವ್ಯವಸ್ಥೆ) ಸಂತೋಷ್ ಬಿ.ಪಿ. ಅವರಿಗೆ ನವೆಂಬರ್ 9ರ ಸೋಮವಾರ ಸಂಜೆ ಖಚಿತ ಮಾಹಿತಿ ಲಭಿಸಿತ್ತು.

kadaba times

​ತಕ್ಷಣವೇ ಎಚ್ಚೆತ್ತ ಪಿಎಸ್‌ಐ ಸಂತೋಷ್ ಬಿ.ಪಿ. ಅವರು ತಮ್ಮ ಠಾಣಾ ಸಿಬ್ಬಂದಿಗಳೊಂದಿಗೆ ಬೀರೋಳಿಗೆಯ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಹಲವು ಜನರು ಗುಂಪು ಕಟ್ಟಿಕೊಂಡು ಕೋಳಿಗಳ ಕಾಲಿಗೆ ಬಾಲು( ಕತ್ತಿ) ಕಟ್ಟಿ, ಹಣವನ್ನು ಪಣವಾಗಿಟ್ಟು ಜೂಜಾಡುತ್ತಿರುವುದು ಕಂಡುಬಂದಿದೆ.

uniq

​ಪೊಲೀಸರನ್ನು ಕಂಡು ಪರಾರಿಯಾದ ಗುಂಪು – ಓರ್ವನ ಸೆರೆ:ಪೊಲೀಸ್ ತಂಡ ದಿಢೀರ್ ದಾಳಿ ನಡೆಸುತ್ತಿದ್ದಂತೆಯೇ ಜೂಜಾಟದಲ್ಲಿ ತೊಡಗಿದ್ದ ಹಲವರು ಸ್ಥಳದಿಂದ ಕಾಲ್ಕಿತ್ತು ಪರಾರಿಯಾಗಿದ್ದಾರೆ. ಈ ವೇಳೆ ಬೆನ್ನಟ್ಟಿದ ಪೊಲೀಸರು ಚಾರ್ವಾಕ ನಿವಾಸಿ ಬಾಲಕೃಷ್ಣ (46) ಎಂಬಾತನನ್ನು ಸ್ಥಳದಲ್ಲೇ ಸುತ್ತುವರಿದು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

​ಬಂಧಿತ ಬಾಲಕೃಷ್ಣನನ್ನು ತಪಾಸಣೆಗೆ ಒಳಪಡಿಸಿದಾಗ ಆತನ ಬಳಿ ಜೂಜಾಟದಿಂದ ಗಳಿಸಿದ್ದ ₹1,030/- ನಗದು ಹಣ ಪತ್ತೆಯಾಗಿದೆ. ಜೊತೆಗೆ ಅಂಕದ ಅಖಾಡದಲ್ಲಿದ್ದ 5 ಜೀವಂತ ಅಂಕದ ಕೋಳಿಗಳು ಹಾಗೂ ಕೋಳಿ ಕಾಲುಗಳಿಗೆ ಕಟ್ಟಲು ಬಳಸಲಾಗುವ ಚೂಪಾದ ಕತ್ತಿಯನ್ನು (ಬಾಳ್) ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಪ್ರಾಣಿಗಳಿಗೆ ಹಿಂಸೆ ನೀಡಿ, ಸಾರ್ವಜನಿಕ ಸ್ಥಳದಲ್ಲಿ ಹಣ ಪಣವಾಗಿಟ್ಟು ಜೂಜಾಟವಾಡಿದ ಅಪರಾಧಕ್ಕಾಗಿ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 133/2026 ರಂತೆ ಪ್ರಕರಣ ದಾಖಲಾಗಿದೆ.

​ಆರೋಪಿಗಳ ವಿರುದ್ಧ:​ಕರ್ನಾಟಕ ಪೊಲೀಸ್ ಕಾಯ್ದೆ-1963ರ ಕಲಂ 87, 93 (ಸಾರ್ವಜನಿಕ ಸ್ಥಳದಲ್ಲಿ ಜೂಜಾಟ)​ಪ್ರಾಣಿ ಹಿಂಸೆ ತಡೆ ಕಾಯ್ದೆ-1960ರ ಕಲಂ 11(1)(m)(ii), 11(1)(n) (ಪ್ರಾಣಿಗಳನ್ನು ಕಾದಾಟಕ್ಕೆ ಬಳಸುವುದು ಮತ್ತು ಹಿಂಸೆ)​ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 112 r/w 3(5) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು,  ಪರಾರಿಯಾದ ಇತರ ಜೂಜುಕೋರರ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

Related Articles

Latest Articles